CM BSY blackmailed by his own family-Yathnal | ಸಿಎಂ ಅವರನ್ನೇ ಬ್ಲ್ಯಾಕ್‌ಮೇಲ್ ಮಾಡಲಾಗ್ತಿದೆ ಎಂದ ಬಿಜೆಪಿ ನಾಯಕ ಯತ್ನಾಳ್


Yathnal briefing media

ರಾಜ್ಯ ರಾಜಕೀಯದಲ್ಲೇ ಬಹು ದೊಡ್ಡ ಸಂಚಲನ ಉಂಟು ಮಾಡುವ ಸ್ಫೋಟಕ ಹೇಳಿಕೆಯೊಂದನ್ನು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ಧಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯವರನ್ನೇ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಹೇಳಿದ್ಧಾರೆ.



ಪದತ್ಯಾಗ ಮಾಡಿದ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಸಿಡಿ ಬಹಿರಂಗವಾದ ಬೆನ್ನಲ್ಲೇ ಯತ್ನಾಳ್ ಈ ರೀತಿಯ ಹೇಳಿಕೆ ನೀಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.


ಇದೊಂದು ಎರಡು ಕಣ್ಣಿನಿಂದ ನೋಡಲಾಗದ ಸಿಡಿ ಎಂದು ಬಣ್ಣಿಸಿದ ಅವರು, ಸ್ವತಃ ಅವರ ಮೊಮ್ಮಗನೇ ಬಿಎಸ್ವೈ ಅವರ ಸಿಡಿಯನ್ನು ತಯಾರಿಸಿದ್ದಾರೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.