-->

Yathra to awareness by Magician Ramakrishna | ಕನ್ಯಾಕುಮಾರಿ- ಕಾಶ್ಮೀರಕ್ಕೆ: ಕಣ್ಣಿಗೆ ಬಟ್ಟೆ ಕಟ್ಟಿ ಜಾದೂಗಾರ ರಾಮಕೃಷ್ಣ ಅವರ ಭಾರತ್ ಸಂದೇಶ್ ಯಾತ್ರ

Yathra to awareness by Magician Ramakrishna | ಕನ್ಯಾಕುಮಾರಿ- ಕಾಶ್ಮೀರಕ್ಕೆ: ಕಣ್ಣಿಗೆ ಬಟ್ಟೆ ಕಟ್ಟಿ ಜಾದೂಗಾರ ರಾಮಕೃಷ್ಣ ಅವರ ಭಾರತ್ ಸಂದೇಶ್ ಯಾತ್ರ








ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ಚಲಾಯಿಸುವ ಜಾದೂ ಸಾಹಸವನ್ನು ಆರಂಭಿಸಿರುವ ಹೈದರಾಬಾದಿನ ಜಾದೂಗಾರ ರಾಮಕೃಷ್ಣ ಇವರು ಮಂಗಳೂರಿಗೆ ಆಗಮಿಸಿದರು.


ಜಾದೂಗಾರ ಕುದ್ರೋಳಿ ಗಣೇಶ್ ನೇತೃತ್ವದ "ವಿಸ್ಮಯ ಜಾದೂ ಪ್ರತಿಷ್ಠಾನ", ಜೆಸಿಐ ಮಂಗಳೂರು - ಲಾಲ್ ಭಾಗ್, "ಎ ವವ್ ಲಾಜಿಕ್" ಸಂಸ್ಥೆ ಹಾಗೂ ಮಂಗಳಾ ಮ್ಯಾಜಿಕ್ ವರ್ಲ್ಡ್ ಸಂಸ್ಥೆಯ ವತಿಯಿಂದ ಅವರಿಗೆ ಸ್ವಾಗತ ನೀಡಲಾಯಿತು.


ಎ ವನ್ ಲಾಜಿಕ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಾದೂಗಾರ ರಾಮಕೃಷ್ಣ ಇವರು "ಭಾರತ್ ಸಂದೇಶ್ ಯಾತ್ರ" ಹೆಸರಿನ ಈ ಜಾದೂ ಪಯಣವು ಮಾರ್ಚ್ 19 ರಂದು ಹ್ರೈದಾರಾಬಾದ್ ನಲ್ಲಿ ಆರಂಭಗೊಂಡಿದ್ದು 31 ದಿನಗಳಲ್ಲಿ 10,000 ಕಿಲೋ ಮೀಟರ್ ಕ್ರಮಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.


ದೇಶದ ಸುಮಾರು 19 ರಾಜ್ಯಗಳನ್ನು ಈ ಯಾತ್ರೆ ತಲುಪಲಿದೆ. ಇದರಲ್ಲಿ 121 ಜಿಲ್ಲೆಗಳನ್ನು ಸಂಪರ್ಕಿಸಿ ಯಾತ್ರೆ ಮುಂದುವರಿಯಲಿದೆ. ಕರೋನಾ ವೈರಸ್ ಬಗ್ಗೆ ಜನಜಾಗೃತಿ, ರಸ್ತೆ ಸುರಕ್ಷತೆ ಮತ್ತು ದೇಶ ಪ್ರೇಮದ ಸಂದೇಶಗಳನ್ನು ಯಾತ್ರೆ ದಾರಿಯುದ್ದಕ್ಕೂ ಭಿತ್ತರಿಸಲಿದೆ ಎಂದು ಅವರು ತಿಳಿಸಿದರು.


ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ ಭಾರತ ಸಂದೇಶ್ ಯಾತ್ರೆಯನ್ನು ಕೈಗೊಂಡಿರುವ ಜಾದೂಗಾರ ರಾಮಕೃಷ್ಣ ಅವರು ಭಾರತೀಯ ಜಾದೂ ರಂಗಕ್ಕೆ ದೊಡ್ದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.


ಜೆಸಿಐ ಮಂಗಳೂರು, ಲಾಲ್‌ಭಾಗ್ ಇದರ ಅಧ್ಯಕ್ಷರಾಗಿರುಸ ಪ್ರಶಾಂತ್ ಶೆಟ್ಟಿ, ಸಾಮಾಜಿಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಯಾತ್ರೆ ಕೈಗೊಂಡಿರುವ ಜಾದೂಗಾರ ರಾಮಕ್ರಷ್ಣ ಇವರ ಪ್ರಯತ್ನವನ್ನು ಶ್ಲಾಘಿಸಿದರು.


ಎ ವನ್ ಲಾಜಿಕ್ ಸಂಸ್ಥೆಯ ಪ್ರವೀಣ್ ಉಡುಪ ಇವರು ಮಾತನಾಡಿ ಈಗ ಕಣ್ಣು ಬಿಟ್ಟುಕೊಂಡೇ ಬೈಕ್ ಚಲಾಯಿಸುವುದೇ ಕಷ್ಣ ಆಗಿರುವಾದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಭಾರತದಾದ್ಯಂತ ಬೈಕ್ ಚಲಾಯಿಸುವುದು ನಿಜವಾಗಿಯೂ ವಿಸ್ಮಯ ಮತ್ತು ಅಚ್ಚರಿ ಮೂಡಿಸುವ ವಿಷಯ.. ಈ ಸಾಹಸ ಕೈಗೊಂಡಿರುವ ಜಾದೂಗಾರ ರಾಮಕೃಷ್ಣ ಇವರಿಗೆ ಎಲ್ಲರೂ ಬೆಂಬಲಿಸಬೇಕು ಎಂದು ಅಭಿಪ್ರಾಯ್ಪಟ್ಟರು.


ಮಂಗಳಾ ಮ್ಯಾಜಿಕ್ ವರ್ಲ್ಡ್ ಇದರ ಮುಖ್ಯಸ್ಥರಾದ ಜಾದೂಗಾರ ರಾಜೇಶ್ ಮಳಿ ಇವರು ಮಾತನಾಡಿ ಜಾದೂಗಾರ ರಾಮಕೃಷ್ಣ ಇವರ ಜಾದೂ ಸಾಹಸ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.


ಜೂನಿಯರ್ ಚೇಂಬರ್ ಆಫ್ ಇಂಡಿಯಾ ಜೆಸಿಐನ ಮಂಗಳೂರು ಲಾಲ್‌ಭಾಗ್ ಇದರ ಸ್ಥಾಪಕ ಅಧ್ಯಕ್ಷ ಪೀಟರ್ ಪಿಂಟೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಸ್ಮಯ ಜಾದೂ ಪ್ರತಿಷ್ಠಾನ ಹಾಗೂ ಜೆಸಿಐ ಜಂಟಿ ಸಹಭಾಗಿತ್ವದಲ್ಲಿ ಜಾದೂಗಾರ ರಾಮಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಜಾದೂಗಾರ ರಾಮಕೃಷ್ಣ ಅವರು ವಿವಿಧ ಸಾಮಾಜಿಕ ಸಂದೇಶಗಳನ್ನು ಬಿಂಬಿಸುವ ಯಕ್ಷಿಣಿ ಪ್ರದರ್ಶನವನ್ನು ಮಾಡಿ ಸೇರಿದ್ದವರನ್ನು ರಂಜಿಸಿದರು. ಬಳಿಕ ರಾಮಕೃಷ್ಣ ಅವರು ಕಣ್ಣುಗುಡ್ಡೆಗಳ ಮೇಲೆ ಹತ್ತಿಯ ಉಂಡೆ ಇರಿಸಿ ಕಪ್ಪು ಪಟ್ಟಿಯಿಂದ ಬಿಗಿದು ಕಟ್ಟಲಾಯಿತು. ಇಡೀ ತಲೆಯನ್ನು ಕಪ್ಪು ಚೀಲದಿಂದ ಮುಚ್ಚಲಾಯಿತು.


ಕಣ್ಣಿಗೆ ಏನೂ ಕಾಣಲಾಗದ ಈ ಕುರುಡು ಸ್ಥಿತಿಯಲ್ಲಿ ಜಾದೂಗಾರ ರಾಮಕೃಷ್ಣ ಅವರು ತಮ್ಮ ಬೈಕ್ ಹತ್ತಿ ಕನ್ಯಾಕುಮರಿಯಿಂದ ಕಾಶ್ಮೀರಕ್ಕೆ ನಡೆದ ಭಾರತ್ ಸಂದೇಶ ಯಾತ್ರವನ್ನು ಮುಂದುವರಿಸಿದರು.


Ads on article

Advertise in articles 1

advertising articles 2

Advertise under the article