- ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಮೇಲೆ ಕೇಸ್
- ಆರೋಪಿ ಮೇಲೆ ಅಕ್ರಮವಾಗಿ ಒತ್ತಡ ಹೇರಿದ್ದ ಇಡಿ
- ಕೇರಳ ಸಿಎಂ ಪಿಣರಾಯಿ ವಿರುದ್ಧ ಹೇಳಿಕೆಗೆ ಒತ್ತಡ
- ಎರ್ನಾಕುಳಂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲು
- ಕೇರಳ ಪೊಲೀಸರ ದಿಟ್ಟ ಹೆಜ್ಜೆ
ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ ಕೇರಳ ಪೊಲೀಸರು ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಮೇಲೆ ಕೇಸು ಜಡಿದಿದ್ದಾರೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಆರೋಪಿ ಹೇಳಿಕೆ ಪಡೆಯುವಾಗ ಆಗಿನ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡಲು ಒತ್ತಡ ಹಾಕಿದ್ದ ಅಕ್ರಮದಲ್ಲಿ ಇಡಿ ಅಧಿಕಾರಿಗಳು ಆರೋಪಿಗಳಾಗಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಎರ್ನಾಕುಲಂ ಅಪರಾಧ ವಿಭಾಗದ ಪೊಲೀಸರು ಇ.ಡಿ. ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ ಆಗಸ್ಟ್ 12 ಮತ್ತು 13ರಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬಂಧಿಸಿ ಹೇಳಿಕೆ ಪಡೆದಿದ್ದರು. ಮತ್ತು ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಅವರನ್ನು ಸಿಲುಕಿಸಲು ಅಕ್ರಮ ಮಾರ್ಗವನ್ನು ಇಡಿ ಅಧಿಕಾರಿಗಳು ಅನುಸರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.