ABVP Programme at Bantwal | "ಮಾನಸಿಕ ಒತ್ತಡದಿಂದ ವಿಮುಕ್ತರಾದರೆ ಮಹಿಳಾ ಸಬಲೀಕರಣ"





ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಬಂಟ್ವಾಳ ಸಮಿತಿಯ ವತಿಯಿಂದ ಸಿದ್ದಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಅನಂತ ಪದ್ಮ ಹೆಲ್ತ್ ಸೆಂಟರ್ ಸಿದ್ದಕಟ್ಟೆಯ ವೈದ್ಯರಾದ ಡಾ.ಸೀಮಾ ಸುದೀಪ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, ಮಾನಸಿಕ ಒತ್ತಡದಿಂದ ವಿಮುಕ್ತರಾಗುವ ಮೂಲಕ ಮಹಿಳಾ ಸಬಲೀಕರಣ ಸಾಧ್ಯ ಎಂದರು.


ಮುಖ್ಯ ಭಾಷಣಗಾರರಾದ ಎಬಿವಿಪಿ ಹಿರಿಯ ಕಾರ್ಯಕರ್ತೆ ಅಕ್ಷತಾ ಬಜ್ಪೆ ಮಾತನಾಡಿ, ಅವಕಾಶ ಮತ್ತು ಆಯ್ಕೆ ನಮ್ಮ ಕೈಯಲ್ಲಿಯೇ ಇದೆ. ಗಡಿಯಲ್ಲಿ ಯೋಧರಾಗಿ ದೇಶ ರಕ್ಷಿಸುವ ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಖಂಡಿತವಾಗಿಯೂ ಇದೆ. ಅದಕ್ಕಾಗಿ ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಬೇಕಿದೆ, ವಿದ್ಯಾರ್ಥಿನಿಯರು ಅವಕಾಶಗಳ ಬೆನ್ನತ್ತಿ ಹೋದಾಗ ಸಾಧನೆಯ ಶಿಖರವನ್ನೇರಲು ಸಾಧ್ಯ ಎಂದು ಹೇಳಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ 32 ನೇ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಲ್ಲಿ 44.46 ಮೀ ಜ್ಯಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಅವರನ್ನು ಸನ್ಮಾನಿಸಲಾಯಿತು.


ಬಂಟ್ವಾಳ ನಗರ ವಿದ್ಯಾರ್ಥಿನಿ ಪ್ರಮುಖ್ ರೇಶ್ಮಾ, ಹಾಗೂ ಸಿದ್ದಕಟ್ಟೆ ನಗರ ವಿದ್ಯಾರ್ಥಿನಿ ಪ್ರಮುಖ್ ನಿಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜಯಲಕ್ಮೀ ಸ್ವಾಗತಿಸಿ, ಭಾರತಿ ವಂದಿಸಿದರು, ಚಿತ್ರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

BREAKING NEWS
Loading latest news...
Join our WhatsApp Channel Powered By : Online Pudu