ತನ್ನ ಪುತ್ರಿಯ ಸಾಧನೆ ಬಗ್ಗೆ ಆ ಮೊಗದಲ್ಲಿ ಮಂದಹಾಸ ನಗುತ್ತಿತ್ತು. ನನ್ನ ಸುಪೀರಿಯರ್ ಆಫೀಸರ್ ಎಂಬ ಕಾರಣಕ್ಕೋ ಮಗಳ ಸಾಧನೆಗೋ ಸೆಲ್ಯೂಟ್ ಕೊಟ್ಟಾಗ ಡೆಪ್ಯೂಟಿ ಎಸ್‌ಪಿ ಪ್ರಶಾಂತಿ ಮುಖದಲ್ಲಿ ಒಂದು ಸಂತೃಪ್ತಿಯ ನಗು.
ಈ ಫೋಟೋ ಈಗ ದೇಶಾದ್ಯಂತ ವೈರಲ್ ಆಗಿದೆ.
ಕೆಳ ಕ್ರಮಾಂಕದ ಆಫೀಸರ್ ತನ್ನ ಸೀನಿಯರ್ ಡೆಪ್ಯುಟಿ ಎಸ್ಪಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಪ್ರತಿಯಾಗಿ ಆ ಐಪಿಎಸ್ ಅಧಿಕಾರಿಯ ಮುಗುಳುನಗೆ... ಗುಂಟೂರಿನ ಡಿಎಸ್ಪಿ ಪ್ರಶಾಂತಿಯವರ ಮುಖಾಮುಖಿ ತಿರುಪತಿಯ ಕಾರ್ಯಕ್ರಮವೊಂದರಲ್ಲಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ನಡುವೆ ನಡೆದಿದೆ.
ಇದರಲ್ಲೇನು ವಿಶೇಷ ಅಂತ ಯೋಚಿಸ್ತಾ ಇರಬಹುದು.ಇವರಿಬ್ಬರದ್ದು ತಂದೆ ಮಗಳಿನ ಸಂಬಂಧ! ಇಬ್ಬರೂ ಕರ್ತವ್ಯದಲ್ಲಿದ್ದಾಗ ಭೇಟಿ ಆಗಿದ್ದು ಇದೇ ಮೊದಲು.
ಮನೆಯಲ್ಲಿ ತಂದೆ ಮಗಳು.ಇಲ್ಲಿ ಮಗಳು ಸೀನಿಯರ್ ತಂದೆ ಜೂನಿಯರ್! ತಂದೆಗೆ ಸ್ವಲ್ಪ ಜಾಸ್ತೀನೆ ಹೆಮ್ಮೆಯ ಕ್ಷಣ ಇದು!