-->
Rapist Pranesh Arrested | ಅಮಲು ತುಂಬಿದ ಜ್ಯೂಸ್ ಕುಡಿಸಿ ಅತ್ಯಾಚಾರ: ಕಾಲೇಜು ವಿದ್ಯಾರ್ಥಿನಿಯಿಂದ ದೂರು, ಆರೋಪಿ ಬಂಧನ

Rapist Pranesh Arrested | ಅಮಲು ತುಂಬಿದ ಜ್ಯೂಸ್ ಕುಡಿಸಿ ಅತ್ಯಾಚಾರ: ಕಾಲೇಜು ವಿದ್ಯಾರ್ಥಿನಿಯಿಂದ ದೂರು, ಆರೋಪಿ ಬಂಧನ

ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಡ್ರಾಪ್ ಕೊಡುತ್ತೇನೆಂದು ಹೇಳಿ ಕಾರಿನಲ್ಲಿ ಪ್ರಯಾಣಿಸುವಾಗ ಅಮಲು ಭರಿತ ಜ್ಯೂಸ್ ಕುಡಿಸಿ ಉಪಾಯವಾಗಿ ರಹಸ್ಯ ಸ್ಥಳಕ್ಕೆ ಕೊಂಡೊಯ್ದು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಲ್ಲದೆ ಯುವತಿಯ ನಗ್ನ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಬ್ಲ್ಯಾಕ್ ಮಾಡಿದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ.


ಬಂಧಿತ ಆರೋಪಿಯನ್ನು ಉಪ್ಪಿನಂಗಡಿಯ ಪ್ರಾಣೇಶ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯ ಬಂದಾರಿನ ಮನೆಯಲ್ಲಿ ಆಕೆಯ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಲಾಗಿದೆ. 


ಈ ಸಂದರ್ಭದಲ್ಲಿ ಆತ ಕಾಲೇಜು ವಿದ್ಯಾರ್ಥಿನಿಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಯಾರಿಗಾದರೂ ಅತ್ಯಾಚಾರದ ವಿಷಯ ತಿಳಿಸಿದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.


ಈ ಸಂದಿಗ್ಧ ಸ್ಥಿತಿಯಲ್ಲಿ ಅವಮಾನಕ್ಕೆ ಹೆದರಿ ಈ ಕೃತ್ಯದ ಬಗ್ಗೆ ತನ್ನ ಸಂಬಂಧಿಕರಿಗೂ ಹೇಳದೆ ಮೌನ ವಹಿಸಿದ್ದಳು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ರೇಪಿಸ್ಟ್ ಪ್ರಾಣೇಶ, ವಿದ್ಯಾರ್ಥಿನಿಗೆ ಪದೇ ಪದೇ ಫೋನ್ ಕರೆ ಮಾಡಿ ಕರೆದಲ್ಲಿಗೆ ಬರಬೇಕು ಎಂದು ಡಿಮ್ಯಾಂಡ್ ಮಾಡಿದ್ದ. ಇದರಿಂದ ಅನಿವಾರ್ಯವಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನಂತೆ ಪೊಲೀಸರು ಆರೋಪಿಯನ್ನು ಕಾರ್ಕಳದಲ್ಲಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article