
Maya Gang updates | ಪೊಲೀಸ್ ಸಿಬ್ಬಂದಿ ಹಲ್ಲೆ ಪ್ರಕರಣ ಜಾಲಾ ಭೇದಿಸಿದ ಪೊಲೀಸ್ ಇಲಾಖೆ: ವಿಎಚ್‌ಪಿ ಶ್ಲಾಘನೆ
Thursday, January 21, 2021
ಮಂಗಳೂರು ನಗರದ ನೂಚಿತ್ರ ಬಳಿ ಕಳೆದ ತಿಂಗಳು ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಗಣೇಶ್ ಕಾಮತರವರ ಮೇಲೆ ಕೊಲೆ ಮಾಡಲು ಯತ್ನಿಸಿದ ಪ್ರಕರಣವನ್ನು ಭೇದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿದ ಪೊಲೀಸ್ ಕಮಿಷನರ್, ಪೊಲೀಸ್ ಸಹಾಯಕ ಆಯುಕ್ತರು ಮತ್ತು ಪೊಲೀಸ್ ಇಲಖೆಯ ಕೆಲಸವನ್ನು ವಿಶ್ವ ಹಿಂದು ಪರಿಷದ್ ಶ್ಲಾಘಿಸುತ್ತದೆ ಮತ್ತು ಅಭಿನಂದನೆ ಸಲ್ಲಿಸುತ್ತದೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧನಕ್ಕೆ ಒಳಪಟ್ಟವರು PFI ಮತ್ತು SDPI ಕಾರ್ಯಕರ್ತರು ಹಾಗಾಗಿ ಈ ಕೃತ್ಯದಲ್ಲಿ PFI ಮತ್ತು SDPI ಸಂಘಟನೆಯ ಕೈವಾಡವಿರುವುದು ಸಂಶಯ ವ್ಯಕ್ತವಾಗುತ್ತದೆ. ಪೊಲೀಸ್ ಇಲಾಖೆ ತಕ್ಷಣ PFI ಮತ್ತು SDPI ಸಂಘಟನೆಯ ಮುಖಂಡರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದು ಪರಿಷದ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು