-->

High Court Notification | ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 27.1.2021 ರಿಂದ ಕೋರ್ಟ್ ಕಲಾಪಗಳು ಸಹಜ ಸ್ಥಿತಿಯತ್ತ!

High Court Notification | ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 27.1.2021 ರಿಂದ ಕೋರ್ಟ್ ಕಲಾಪಗಳು ಸಹಜ ಸ್ಥಿತಿಯತ್ತ!






ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಪಟ್ಟಂತೆ ದಿನಾಂಕ 27.1.2021ರಿ೦ದ ಅನ್ವಯವಾಗುವ ಮಾರ್ಪಡಿಸಲಾದ (modified) ಕಾರ್ಯವಿಧಾನ ಮಾನದಂಡಗಳ (SOP) ಮುಖ್ಯಾಂಶಗಳು


ದಿನಾಂಕ 18.9.2020 ರ೦ದು ಹೊರಡಿಸಲಾದ ಕಾಯ೯ವಿಧಾನಗಳ ಮಾನದಂಡಗಳನ್ನು ರಾಜ್ಯದ ಬೆಂಗಳೂರು ನಗರ; ಬೆಂಗಳೂರು ಗ್ರಾಮಾಂತರ; ಚಿಕ್ಕಬಳ್ಳಾಪುರ; ದಕ್ಷಿಣ ಕನ್ನಡ; ಮೈಸೂರು;ಶಿವಮೊಗ್ಗ ಮತ್ತು ತುಮಕೂರು ಈ ಏಳು ಜಿಲ್ಲೆಗಳಿಗೆ ಸ೦ಬ೦ಧಪಟ್ಟ೦ತೆ ಮಾಪ೯ಡಿಸಿ ದಿನಾಂಕ 18.1.2021 ರ೦ದು ಮಾನ್ಯ ಕನಾ೯ಟಕ ಹೈಕೋರ್ಟ್ ಈ ಕೆಳಗಿನಂತೆ ಮಾಪ೯ಡಿಸಲಾದ ಕಾಯ೯ವಿಧಾನಗಳ ಮಾನದಂಡಗಳನ್ನು ಪ್ರಕಟಿಸಿದೆ.


1. ದಿನಾಂಕ 27.1.2021 ರಿಂದ ವಕೀಲರು ಮುಂಗಡ ದಿನಾಂಕ ನಿಗದಿಪಡಿಸಿ ಪ್ರಕರಣಗಳನ್ನು ದಾಖಲಿಸ ಬೇಕೆಂದಿಲ್ಲ. ಆದರೆ ನ್ಯಾಯಾಲಯದ ಕಚೇರಿಯ ಹೊರಗಡೆ ಪ್ರತ್ಯೇಕ ಸ್ಥಳದಲ್ಲಿ ಪ್ರಕರಣಗಳನ್ನು ದಾಖಲಿಸುವ ಕ್ರಮವು ಪ್ರಸ್ತುತ ವ್ಯವಸ್ಥೆಯಡಿ ಮುಂದುವರಿಯಲಿದೆ.


2. ಪಕ್ಷಕಾರರು ಸ್ವತಃ ಹಾಜರಾಗುವ ಪ್ರಕರಣಗಳಲ್ಲಿ ಮುಂಗಡ ದಿನಾಂಕ ನಿಗದಿಪಡಿಸಿ ಪ್ರಕರಣಗಳನ್ನು ದಾಖಲಿಸ ಬೇಕೆಂಬ ನಿಯಮ ಮುಂದುವರಿಯಲಿದೆ.


3. ಕ್ಯಾಂಟೀನ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನ್ಯಾಯಾಲಯದ ಕಚೇರಿಯಿಂದ ಪ್ರವೇಶದ ಪಾಸ್ ನೀಡತಕ್ಕದ್ದು. ಕೋವಿಡ್‌ -19 ರೋಗ ಲಕ್ಷಣಗಳುಳ್ಳ ಸಿಬ್ಬಂದಿಯವರನ್ನು ಕ್ಯಾಂಟೀನ್ ನಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಬಗ್ಗೆ ಕ್ಯಾಂಟೀನ್ ಗುತ್ತಿಗೆದಾರರಿ೦ದ ಬದ್ಧತಾ ಪತ್ರ (Undertaking) ಪಡೆಯತಕ್ಕದ್ದು. ಕ್ಯಾಂಟಿನ್ ಎಲ್ಲಾ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಪಾಡಿ ಮುಖಗವಸುಗಳನ್ನು (Mask) ಧರಿಸತಕ್ಕದ್ದು.


4. ಪ್ರಕರಣಕ್ಕೆ ಸಂಬಂಧಪಟ್ಟ ಪಕ್ಷಕಾರರು ವಕೀಲರು ನೀಡಿದ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದಲ್ಲಿ ಮಾತ್ರ ನ್ಯಾಯಾಲಯ ಸಂಕೀರ್ಣದ ಪ್ರವೇಶಕ್ಕೆ ಅನುಮತಿ ನೀಡತಕ್ಕದ್ದು. ಪ್ರವೇಶ ಪತ್ರದ ನಮೂನೆಯನ್ನು ಈ ಸೂಚನಾ ಪತ್ರದೊಂದಿಗೆ ಲಗತ್ತಿಸಿದೆ. ಕಕ್ಷಿದಾರರ ಉಪಸ್ಥಿತಿ ಅಗತ್ಯವಿದ್ದಲ್ಲಿ ಮಾತ್ರ ವಕೀಲರು ಪ್ರವೇಶ ಪತ್ರವನ್ನು ತಮ್ಮ ಕಕ್ಷಿದಾರರಿಗೆ ನೀಡತಕ್ಕದ್ದು. ಪ್ರವೇಶಪತ್ರ ಒಂದು ದಿನಕ್ಕೆ ಮಾತ್ರ ಊರ್ಜಿತದಲ್ಲಿರುತ್ತದೆ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯವರು ಪ್ರವೇಶ ಪತ್ರವನ್ನು ಪರಿಶೀಲಿಸಿ ಸಂಗ್ರಹಿಸಿಡುವ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಪಕ್ಷಕಾರರ ವಿವರಗಳನ್ನು ಸಂಗ್ರಹಿಸಿಡತಕ್ಕದ್ದು.


5. ಕೋರ್ಟ್ ಕಾಂಪ್ಲೆಕ್ಸ್ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೋವಿಡ್ ರೋಗ ಲಕ್ಷಣಗಳ ಪರೀಕ್ಷೆ ಕುರಿತ ಥಮ೯ಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಬೇಕು.


6.. ನ್ಯಾಯಾಲಯ ಸಂಕೀರ್ಣ(ಕೋರ್ಟ್ ಕಾಂಪ್ಲೆಕ್ಸ್) ಪ್ರವೇಶಕ್ಕೆ ಎರಡು ಪ್ರತ್ಯೇಕ ಪ್ರವೇಶ ದ್ವಾರಗಳನ್ನು ತೆರೆಯಬೇಕು. ಒಂದು ಪ್ರವೇಶ ದ್ವಾರದಲ್ಲಿ ಕೇವಲ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಅವಕಾಶ ನೀಡಬೇಕು. ಮತ್ತು ಇನ್ನೊಂದು ಪ್ರವೇಶ ದ್ವಾರದಲ್ಲಿ ಅಂದು ಕೂಗತಕ್ಕಂತಹ ಪ್ರಕರಣದ ಪಕ್ಷಕಾರರು, ಸಾಕ್ಷಿದಾರರು, ಮತ್ತಿತರರಿಗೆ ಅವಕಾಶ ಕಲ್ಪಿಸತಕ್ಕದ್ದು


7. ಎರಡೂ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.


8. ನ್ಯಾಯಾಲಯದ ಸಮುಚ್ಚಯದಲ್ಲಿ; ಕಚೇರಿಯಲ್ಲಿ ; ನ್ಯಾಯಾ೦ಗಣದಲ್ಲಿ ಹಾಗೂ ವಕೀಲರ ಸ೦ಘದಲ್ಲಿ ಮುಖಗವಸನ್ನು (Mask) ಕಡ್ಡಾಯವಾಗಿ ಧರಿಸತಕ್ಕದ್ದು. ಮುಖಗವಸು ಧರಿಸದೆ ಇರುವ ವ್ಯಕ್ತಿಗಳು ಕ೦ಡುಬ೦ದಲ್ಲಿ ಅವರನ್ನು ನ್ಯಾಯಾಲಯದ ಸಮುಚ್ಚಯದಿ೦ದ ತೆರವುಗೊಳಿಸತಕ್ಕದ್ದು.


9. ಕೊರೋನಾ ಸೋಂಕಿನ ರೋಗ-ಲಕ್ಷಣ ಇರುವ ವ್ಯಕ್ತಿಗಳಿಗೆ ನ್ಯಾಯಾಲಯ ಸಂಕೀರ್ಣ ಪ್ರವೇಶ ಮಾಡಲು ಅವಕಾಶ ಇರುವುದಿಲ್ಲ.


10. ವಕೀಲರ ಸಂಘದಲ್ಲಿ ಜನಜಂಗುಳಿಯನ್ನು ತಪ್ಪಿಸಲು ಅರ್ಧಾಂಶ ಆಸನಗಳನ್ನು ತೆರವುಗೊಳಿಸಬೇಕೆಂಬ ಈಗಿರುವ ನಿಬಂಧನೆ ಮುಂದುವರಿಯುತ್ತದೆ.


11. ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಪಕ್ಷಕಾರರು ಅನವಶ್ಯಕವಾಗಿ ನ್ಯಾಯಾಲಯ ಸಂಕೀಣ೯ಕ್ಕೆ ಭೇಟಿ ನೀಡದಂತೆ ನೋಡಿಕೊಳ್ಳವುದು ವಕೀಲರ ಹೊಣೆಗಾರಿಕೆಯಾಗಿದೆ. ಯಾವುದೇ ಸಕಾರಣವಿಲ್ಲದೆ ನ್ಯಾಯಾಲಯ ಪ್ರವೇಶ ಬಯಸುವ ಪಕ್ಷಕಾರರಿಗೆ ಪ್ರವೇಶವನ್ನು ನಿರಾಕರಿಸುವ ಅಧಿಕಾರವನ್ನು ನ್ಯಾಯಾಲಯದ ಸಿಬ್ಬಂದಿ ಹೊ೦ದಿರುತ್ತಾರೆ.


12.ಪಕ್ಷಕಾರರ ಉಪಸ್ಥಿತಿ ಅವಶ್ಯವಿದ್ದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಲು ಪಕ್ಷಕಾರರಲ್ಲಿ ಮನವಿ ಮಾಡುವ೦ತೆ ವಕೀಲರ ಸಂಘವನ್ನು ಕೋರಲಾಗಿದೆ


*ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸಂಬಂಧಪಟ್ಟಂತೆ ಕಾರ್ಯವಿಧಾನಗಳ ಮಾನದಂಡಗಳಲ್ಲಿ ಮಾಡಲಾದ ಮಾರ್ಪಾಡುಗಳು*


I ವಕೀಲರುಗಳ ಉಡುಪು ಸಂಹಿತೆಯಲ್ಲಿ ಮಾಡಲಾದ ಸಡಿಲಿಕೆ ತೆಗೆದುಕೊಳ್ಳಲಾಗಿದೆ. ದಿನಾಂಕ 1.2.2021 ರಿಂದ ಅನ್ವಯವಾಗುವಂತೆ ವಕೀಲರುಗಳು ಮಾಮೂಲಿ ಉಡುಪು ಸಂಹಿತೆಯನ್ನು ಪಾಲಿಸತಕ್ಕದ್ದು.


II. ನ್ಯಾಯಾಲಯಗಳ ಪೀಠಾಸೀನಾಧಿಕಾರಿಗಳು ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಿ ನ್ಯಾಯಾಂಗಣದಲ್ಲಿ ಹಾಜರುಪಡಿಸುವ ಎಲ್ಲಾ ದಾಖಲಾತಿಗಳನ್ನು/ ಅರ್ಜಿಗಳನ್ನು/ ವಕಾಲತ್ ಗಳನ್ನು/ ಜ್ಞಾಪನಾಪತ್ರಗಳನ್ನು ಲಾಕ್ ಡೌನ್ ಮುಂಚೆ ಯಾವ ರೀತಿಯಲ್ಲಿ ಸ್ವೀಕರಿಸುತ್ತಿದ್ದರೋ ಅದೇ ರೀತಿಯಲ್ಲಿ ಸ್ವೀಕರಿಸತಕ್ಕದ್ದು. ನ್ಯಾಯಾಲಯದ ಶಿರಸ್ತೇದಾರ ರುಗಳು/ ನ್ಯಾಯಾಲಯದ ಅಧಿಕಾರಿಗಳು ಮುಖಗವಸುಗಳನ್ನು ಧರಿಸಿ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ.


III. ಈ ಮೇಲೆ ಕಾಣಿಸಿದ ಎಲ್ಲಾ ಸಡಿಲಿಕೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಮಾಡಲಾಗಿದೆ. ವಕೀಲರು; ಪಕ್ಷಕಾರರು ಸಾಮಾಜಿಕ ಅಂತರ ಕಾಪಾಡದೆ; ಮಾಸ್ಕ್ ಧರಿಸದೆ; ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಮಾನ್ಯ ಹೈಕೋರ್ಟ್ ಸಡಿಲಿಕೆಗಳನ್ನು ಹಿಂತೆಗೆದುಕೊಳ್ಳುವ ಅಧಿಕಾರ ಹೊ೦ದಿದೆ.


*ಮಾಹಿತಿ ಹಂಚಿಕೊಂಡವರು: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಷಿಯಲ್ ಸರ್ವಿಸ್ ಸೆಂಟರ್: ಮಂಗಳೂರು.*

Ads on article

Advertise in articles 1

advertising articles 2

Advertise under the article