ಮಂಗಳೂರು: ಮಂಗಳೂರು ಹೊರ ವಲಯದ ಅಡ್ಡೂರು ಎಂಬಲ್ಲಿ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಯುವಕನನ್ನು ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡಿರುವ ಯುವಕನನ್ನು ಅಡ್ಡೂರು ಗ್ರಾಮದ ನಿವಾಸಿ 30 ವರ್ಷದ ಮೊಹಮ್ಮದ್ ತಾಜುದ್ದೀನ್ ಎಂದು ಗುರ್ತಿಸಲಾಗಿದೆ. ಹಳೆ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ತಾಜುದ್ದೀನ್ ಅವರ ತೊಡೆ ಭಾಗ, ಕೈ ಹಾಗೂ ದೇಹದ ಇತರ ಕಡೆಗಳಲ್ಲಿ ಗಾಯಗಳಾಗಿವೆ. ಮೂವರು ದುಷ್ಕರ್ಮಿಗಳ ಗುಂಪು ಈ ಕೃತ್ಯವೆಸಗಿ ಪರಾರಿಯಾಗಿದೆ. ಗಾಯಗೊಂಡವರನ್ನು ಗುರುತಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.