Rapist Police officer | ಮಹಿಳಾ ಪಿಎಸ್‌ಐ ಮೇಲೆ ಲೈಂಗಿಕ ದೌರ್ಜನ್ಯ: ಗರ್ಭಿಣಿ ಎಂದು ತಿಳಿದ ಬಳಿಕ ಪ್ಲೇಟ್ ಬದಲಿಸಿದ ರೇಪಿಸ್ಟ್!





emungaur exclusive: ಸಹೋದ್ಯೋಗಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಕಥೆ ಇದು. ಈ ಘಟನೆ ನಮ್ಮ ರಾಜ್ಯದಲ್ಲೇ ನಡೆದಿರುವುದು ಎಲ್ಲರ ಹುಬ್ಬೇರಿಸಿದೆ. ಅದೂ ಸಾಂಸ್ಕೃತಿಕ ರಾಜಧಾನಿ ಎಂದು ಹೆಮ್ಮೆಯಿಂದ ಕರೆಸಲ್ಪಡುವ ಮೈಸೂರಿನಲ್ಲಿ.


ಘಟನೆಯ ಹಿನ್ನೆಲೆ:



emungaur exclusive:  ಮೈಸೂರು ವ್ಯಾಪ್ತಿಗೆ ಬರುವ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಸಬ್‌ ಇನ್ಸ್‌ಪೆಕ್ಟರ್ ಆಗಿದ್ದ ಇಬ್ಬರ ನಡುವೆ ಸ್ನೇಹ, ವಿಶ್ವಾಸ ಬೆಳೆದು ಪ್ರೀತಿಗೆ ಪರಿವರ್ತನೆಯಾಗಿತ್ತು. ಮಹಿಳಾ ಎಸ್‌ಐ ಜೊತೆಗೆ ಮೈಸೂರಿನ ಪಾರ್ಕ್, ಝೂಗಳಲ್ಲಿ ತಿರುಗಾಡಿದ ಖಾಕಿ ಅಧಿಕಾರಿಯೊಬ್ಬ, ಈ ಸ್ನೇಹವನ್ನೇ ತನ್ನ ಕಾಮತೃಷೆಗಾಗಿ ಬಳಸಿಕೊಂಡ.



ಪರಸ್ಪರ ಸುತ್ತಾಡಿ, ಆಕೆಯ ವಿರೋಧವನ್ನೂ ಲೆಕ್ಕಿಸದೆ ಬಲವಂತದಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ. ಆಕೆಯ ಜೊತೆಗಿನ ನಿರಂತರ ದೈಹಿಕ ಸಂಪರ್ಕ ಬೆಳೆಸಿದ. ಆಕೆ ಗರ್ಭಿಣಿ ಎಂದು ಗೊತ್ತಾದ ಕೂಡಲೇ ಪ್ಲೇಟ್ ಬದಲಿಸಿದ. ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿದ. ಇದನ್ನೇ ನಂಬಿದ ಆಕೆಯನ್ನೂ ಮತ್ತಷ್ಟೂ ಮಂಗ ಮಾಡಿ ಹಲವು ಬಾರಿ ಅತ್ಯಾಚಾರ ನಡೆಸಿದ.



emungaur exclusive:  ಈ ಮಧ್ಯೆ, ಈತನಿಗೆ ಬೇರೊಂದಿಗೆ ಯುವತಿ ಜೊತೆ ಮದುವೆ ನಿಶ್ಚಿಯವಾಯಿತು. ಈ ಮಾಹಿತಿ ತಿಳಿದ ನಂತರ ಮಹಿಳಾ ಪೊಲೀಸ್ ಅಧಿಕಾರಿ ಮದುವೆ ಮನೆಗೆ ತೆರಳಿ ಮದುವೆಯನ್ನು ನಿಲ್ಲಿಸಿದರು. ಇದರಿಂದ ಕುಪಿತಗೊಂಡ ಕಾಮುಕ ಪೊಲೀಸಪ್ಪ, ಯಾರ ಅರಿವಿಗೂ ಬಾರದ ಹಾಗೆ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎಂದು ಮಹಿಳಾ ಪೊಲೀಸ್ ಎಸ್‌ಐ ಹೇಳಿಕೊಂಡಿದ್ದಾರೆ.



emungaur exclusive:  ಬಳಿಕ ಈತನ ನಿಜರೂಪ ಗೊತ್ತಾದ ಈ ಮಹಿಳಾ ಅಧಿಕಾರಿ ಈಗ ಮೈಸೂರಿನ ವಿಜಯನಗರ ಠಾಣೆಯ ಮೆಟ್ಟಿಲೇರಿದ್ದಾರೆ. ಆತನ ವಿರುದ್ಧ ನೀಡಿದ ದೂರಿನಲ್ಲಿ ತನ್ನ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾಳೆ.



emungaur exclusive:  ಅಷ್ಟೇ ಅಲ್ಲ, ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾಗಲು ಹಾಗೂ ತನ್ನ ಅರಿವಿಗೆ ಬಾರದಂತೆ ತಿಂಡಿ ತಿನಸುಗಳಲ್ಲಿ ಗರ್ಭಪಾತವಾಗುವ ಮದ್ದು ನೀಡಿದ್ದ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ.



emungaur exclusive:  ಆರೋಪಿ ಸ್ಥಾನದಲ್ಲಿ ಇರುವ ಪಿಎಸ್‌ಐ ವಿರುದ್ಧ ಭಾರತೀಯ ದಂಡ ಸಂಹಿತೆಯ 376, 406, 313, 354, 417, 504, 506 ಹಾಗೂ 509 ಕಲಂಗಳಡಿ ಪ್ರಕರಣ ದಾಖಲಾಗಿದೆ.



emungaur exclusive:  ಆರೋಪಿ ಇದೀಗ ತಲೆಮರೆಸಿಕೊಂಡಿದ್ದು, ಪೊಲೀಸ್ ಅಧಿಕಾರಿಗಾಗಿ ಪೊಲೀಸರೇ ತಲಾಶ್ ಮಾಡುವಂತಹ ಪ್ರಸಂಗ ಎದುರಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu