ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

Rapist bail rejected | 'ನಟಿ ಮಾಡುತ್ತೇನೆ, ಧಾರಾವಾಹಿಯಲ್ಲಿ ಅವಕಾಶ ಕೊಡ್ತೇನೆ': ನಿರ್ಮಾಪಕ ಎಂದು ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ಕಿರಕುಳ




ಕಿರುತೆರೆ ಟಿ.ವಿ. ಧಾರಾವಾಹಿಯಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ವಂಚಿಸಿ ನಟಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.



ಹಾಸನದ ಅಪ್ರಾಪ್ತ ವಯಸ್ಕ ಯುವತಿಯನ್ನು ತಾನು ನಿರ್ಮಾಪಕ ಎಂದು ನಂಬಿಸಿ, ಟಿವಿ ಧಾರಾವಾಹಿಯಲ್ಲಿ ನಟಿ ಮಾಡುತ್ತೇನೆ ಎಂದು ನಂಬಿಸಿ ಆನಂದ್ ಎಂಬಾತ ಬೆಂಗಳೂರಿಗೆ ಕರೆ ತಂದಿದ್ದ.



ಅಲ್ಲಿ ಆಕೆಯನ್ನು ಲಾಡ್ಜ್‌ವೊಂದರಲ್ಲಿ ಇರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ ಅತ್ಯಾಚಾರವನ್ನೂ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.



ಆರೋಪಿ ಆನಂದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳನ್ನು ವಂಚಿಸಿ ಮೋಸ ಮಾಡಿದ್ದಾನೆ. ಅಲ್ಲದೆ, ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಇದೊಂದು ಪ್ರೇಮ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಅಮಾಯಕಳನ್ನು ಲೈಂಗಿಕವಾಗಿ ಅತ್ಯಾಚಾರ ಮಾಡಿದ ಪ್ರಕರಣ ಜೊತೆಗೆ ವಂಚನೆ ಪ್ರಕರಣವೂ ಆಗಿದೆ. ಆದ್ದರಿಂದ ಜಾಮೀನು ನೀಡಲು ಯಾವುದೇ ಸಕಾರಣ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಮಗಳು ಕಾಣೆಯಾಗಿದ್ದಾಳೆ ಎಂದು ಬಾಲಕಿಯ ತಾಯಿ 2020ರ ಮಾರ್ಚ್ 6ರಂದು ಹಾಸನ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಲ್ಲಿ ಆನಂದ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.