-->

Kateel Mela goes for time limit show | ರೂಪಾಂತರ ಕೊರೋನಾ ಭೀತಿ: ಐತಿಹಾಸಿಕ ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ!

Kateel Mela goes for time limit show | ರೂಪಾಂತರ ಕೊರೋನಾ ಭೀತಿ: ಐತಿಹಾಸಿಕ ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ!




ಮಂಗಳೂರು: ಕಾಲಕ್ಕೆ ತಕ್ಕ ಬದಲಾಗಬೇಕು... ಇದು ಜಗದ ನಿಯಮ. ಇಲ್ಲದಿದ್ದರೆ ಉಳಿಗಾಲವಿಲ್ಲ. ಇದನ್ನು ಕೊರೋನಾ ಎಂಬ ಮಹಾಮಾರಿ ಪಾಠ ಕಲಿಸಿದೆ. ಯಕ್ಷರಂಗದಲ್ಲೂ ಈ ಭೀತಿ ಹಲವಾರು ಬದಲಾವಣೆಗೆ ನಾಂದಿ ಹಾಡಿದೆ.



ಇದೇ ಮೊದಲ ಬಾರಿಗೆ ಕಟೀಲು ಯಕ್ಷಗಾನ ಮೇಳವೂ ಕಾಲಮಿತಿಯ ಪ್ರದರ್ಶನಕ್ಕೆ ತನ್ನನ್ನು ತೆರೆದುಕೊಳ್ಳುವಂತೆ ಮಾಡಿದೆ. ಕಾರಣ, ರೂಪಾಂತರಗೊಂಡ ಕೊರೊನಾ ಭೀತಿ ಮತ್ತು ಆ ಭೀತಿಯಿಂದ ರಾಜ್ಯ ಸರ್ಕಾರ ಹೇರಿರುವ ನೈಟ್ ಕರ್ಫ್ಯೂ. ಈ ಕಾರಣದಿಂದ ಯಕ್ಷಗಾನದ ಆಡಳಿತ ಹೊಸ ವ್ಯವಸ್ಥೆಯನ್ನು ಅನಿವಾರ್ಯವಾಗಿ ಆರಂಭಿಸಿದೆ.



ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಯಕ್ಷಗಾನದ ಪ್ರಸಂಗ ಆರಂಭವಾಗಲಿದೆ. ರಾತ್ರಿ 9-45ಕ್ಕೆ ಮಂಗಳ ಹಾಡುವುದರ ಮೂಲಕ ಭಾಗವತರು ಆ ದಿನದ ಯಕ್ಷಗಾನದ ಪ್ರಸಂಗಕ್ಕೆ ವಿಧ್ಯುಕ್ತ ಅಂತ್ಯ ಹಾಡಲಿದ್ದಾರೆ.




ಈ ಹೊಸ ವ್ಯವಸ್ಥೆ ಪ್ರಕಾರ, ಪ್ರತಿ ದಿನ 2-30ಕ್ಕೆ ಎಲ್ಲ ಕಲಾವಿದರು ಚೌಕಿಯಲ್ಲಿ ಉಪಸ್ಥಿತರಿರಬೇಕು. ಈ ಕಾಲಮಿತಿ ಯಕ್ಷಗಾನ ವ್ಯವಸ್ಥೆ ನೈಟ್ ಕರ್ಫ್ಯೂ ಮುಗಿಯುವವರೆಗೆ ಮುಂದುವರಿಯಲಿದೆ.

Ads on article

Advertise in articles 1

advertising articles 2

Advertise under the article