-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
How to get treatment for Thyroid | ಥೈರಾಯ್ಡ್ ಸಮಸ್ಯೆಗೆ ಚಿಕಿತ್ಸೆ ಏನು?

How to get treatment for Thyroid | ಥೈರಾಯ್ಡ್ ಸಮಸ್ಯೆಗೆ ಚಿಕಿತ್ಸೆ ಏನು?

ಲೇಖನ: ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಖ್ಯಾತ ವೈದ್ಯರು






ಆಯುರ್ವೇದ, ಹೋಮಿಯೋಪತಿಗಳಲ್ಲಿ ಥೈರಾಯ್ಡ್, ಹಾರ್ಮೋನ್ ಇತ್ಯಾದಿ ಸಮಸ್ಯೆಗಳೆನ್ನುವ ವಿಷಯವೇ ಇಲ್ಲ, ಅಲ್ಲಿರುವುದು ಏನಿದ್ದರೂ ವಾತ, ಪಿತ್ತ, ಕಫ, ಮಿಯಾಸ್ಮ್ ಇತ್ಯಾದಿಗಳಷ್ಟೇ. ಅವುಗಳಿಂದ ಥೈರಾಯ್ಡ್ ಚಿಕಿತ್ಸೆ ಎನ್ನುವುದು ಬೊಗಳೆ ಮಾತ್ರ. ಥೈರಾಯ್ಡ್ ಕೊರತೆಯಿದ್ದರೆ ಅದರ 100 ಮೈಕ್ರೊಗ್ರಾಮ್ ಮಾತ್ರೆಗೆ ದಿನಕ್ಕೆ ಒಂದೂವರೆ ರೂಪಾಯಿ ಖರ್ಚು, ಅದು ಬೇಡ ಅಂತ ಹೋಮಿಯೋ ಚಿಕಿತ್ಸೆಗೆ 30000ದಷ್ಟು ಕೊಟ್ಟು, ವರ್ಷಕ್ಕೆ 500 ರೂ ತಗಲುವ ಆಧುನಿಕ ಔಷಧವನ್ನು ಬಿಟ್ಟು ಮತ್ತೆ ಸಮಸ್ಯೆಗೆ ಬೀಳುವ ಹಲವರನ್ನು ಪ್ರತಿನಿತ್ಯ ನೋಡುತ್ತೇವೆ.



ಇನ್ನು ಯೋಗ ವೈದ್ಯಕೀಯ ಪದ್ಧತಿಯೇ ಅಲ್ಲ, ಅದರಿಂದ ಯಾವ ರೋಗದ ಚಿಕಿತ್ಸೆಯೂ ಸಾಧ್ಯವೇ ಇಲ್ಲ. ಯೋಗದಿಂದ ತನ್ನ ಥೈರಾಯ್ಡ್ ವಾಸಿಯಾಯಿತು ಎಂದು ಸುಧಾದಲ್ಲಿ, ಇತರೆಡೆಗಳಲ್ಲಿ ಹಲವು ಲೇಖನಗಳನ್ನು ಬರೆದಿದ್ದವರಿಗೆ ನೇರವಾಗಿ ಇ ಮೇಲ್ ಬರೆದು ವಿವರಗಳನ್ನು ಕೇಳಿದ್ದೆ - ನಿಮ್ಮದು ನಿಮ್ಮಲ್ಲಿರಲಿ, ನನ್ನದು ನನ್ನಲ್ಲಿ ಎಂದು ಆ 'ವಿಜ್ಞಾನಿ' ಉತ್ತರಿಸಿದ್ದರು, ಅದು ನನ್ನ ಬಳಿ ಇದೆ.

ಅಯೋಡಿನ್ ಉಪ್ಪು ಬಳಸಲಾರಂಭಿಸಿದ ಮೇಲೆ ಥೈರಾಯ್ಡ್ ಕಾಯಿಲೆಗಳು ಹೆಚ್ಚಾಗಿವೆಯೇ ಹೊರತು ಕಡಿಮೆಯಾಗಿಲ್ಲ; ಆದರೆ ಅಯೋಡಿನ್ ಇಲ್ಲದ ಉಪ್ಪೇ ಸಿಗದಂತೆ ಮಾಡಲಾಗಿರುವುದರಿಂದ ಆ ಬಗ್ಗೆ ಈಗ ಬರೆದು ಫಲವಿಲ್ಲ.



ಥೈರಾಯ್ಡ್ ಕಾರ್ಯಕ್ಷಮತೆ ಕುಗ್ಗುವುದಕ್ಕೆ ಆಧುನಿಕ ಆಹಾರ ಮತ್ತು ಜೀವನಶೈಲಿಗಳೇ ಮುಖ್ಯ ಕಾರಣಗಳು, ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚು. ತೀರಾ ಅಪರೂಪಕ್ಕೆ ಅದು ತಾನಾಗಿ ಸರಿಯಾಗುವುದಿದ್ದರೂ ಬಹುತೇಕ ಎಲ್ಲರೂ ತಮ್ಮಲ್ಲಿರುವ ಕೊರತೆಯ ಪ್ರಮಾಣವನ್ನು ಸರಿದೂಗಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಥೈರಾಕ್ಸಿನ್ ಮಾತ್ರೆಗಳನ್ನು ನಿತ್ಯವೂ ಸೇವಿಸಬೇಕು; ಆರು ತಿಂಗಳಿಗೊಮ್ಮೆಯಾದರೂ ರಕ್ತದಲ್ಲಿ TSH ಮಟ್ಟವನ್ನು (ಅದಷ್ಟೇ ಸಾಕು, T4, T3 ಆಗಾಗ ನೋಡಬೇಕಿಲ್ಲ) ನೋಡಿ ಮಾತ್ರೆಯ ಪ್ರಮಾಣ ಸಾಕೇ ಎನ್ನುವುದನ್ನು ನೋಡಬೇಕು; ಇವೆಲ್ಲಕ್ಕೆ, ಮಾತ್ರೆಗೂ ಸೇರಿ, ಏನಿದ್ದರೂ ವರ್ಷಕ್ಕೆ 1000 ರೂ ಸಾಕು. ಆ ಯೋಗಪರ 'ವಿಜ್ಞಾನಿ' ಇದನ್ನೇ ಒಂದು ಮಹಾ ವೈದ್ಯಕೀಯ ಮಾಫಿಯಾ ಅಂತೆಲ್ಲ ಬಣ್ಣಿಸಿದ್ದರು. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಮಿಯೋಪತಿಗೆ ಆಗಾಗ 30000 ರೂ ಕೊಡುವ ಬುದ್ಧಿವಂತರು ಇದ್ದಾರೆ. ದಿನಾ ಬೆಳಗ್ಗೆ ಒಂದು ರೂಪಾಯಿಯ ಒಂದು ಸಣ್ಣ ಮಾತ್ರೆ ನುಂಗಿ ನೀರು ಕುಡಿಯುವುದು ಕಷ್ಟವೆನಿಸಿ, ಮಾಫಿಯಾ ಎನಿಸಿ, ಬದಲಿಗೆ ಬೆಳಗ್ಗೆ ನಾಲ್ಕೂವರೆಗೆದ್ದು ಯೋಗ ಮಾಡುವುದೇ ಸರಿ ಎಂಬವರ ಜೊತೆ ಹೆಚ್ಚು ಚರ್ಚಿಸುವುದು ಸರಿಯಲ್ಲ.



ಥೈರಾಯ್ಡ್ ಸ್ರಾವ ಹೆಚ್ಚಾಗುವ ಸಮಸ್ಯೆಯಿದ್ದರೆ ಅದಕ್ಕೆ ಕಾರಣವನ್ನು ಹುಡುಕಿ, ವಯಸ್ಸು ಇತ್ಯಾದಿಗಳನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಆಯುರ್ವೇದ, ಹೋಮಿಯೋಪತಿ, ಯೋಗಗಳಿಗೆ ಇಲ್ಲೂ ಕೆಲಸವಿಲ್ಲ.



ಥೈರಾಯ್ಡ್ ಗ್ರಂಥಿಯ ಗಾತ್ರವು ದೊಡ್ಡದಾಗುತ್ತಿದ್ದರೆ ಅದೇಕೆ ಎಂದು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ ಮತ್ತು ಅದಕ್ಕನುಗುಣವಾಗಿ ಶಸ್ತ್ರ ಚಿಕಿತ್ಸೆಯ ಬಗ್ಗೆ ನಿರ್ಧರಿಸಬೇಕಾಗುತ್ತದೆ.

ಥೈರಾಯ್ಡ್ ರೋಗಗಳ ಕುರಿತಾದ ಅತಿ ಮನ್ನಣೆಯ ಪಠ್ಯ ಪುಸ್ತಕದಲ್ಲಿ 1000 ಪುಟಗಳಿವೆ, ಅದರ ಒಂದೊಂದು ಸಮಸ್ಯೆಗಳ ಬಗ್ಗೆಯೂ ಪ್ರತ್ಯೇಕ ಪುಸ್ತಕಗಳೂ, ಜರ್ನಲ್ ಗಳೂ ಇವೆ. ಆಯುರ್ವೇದ, ಹೋಮಿಯೋಪತಿ, ಯೋಗಗಳ ಮೋಸಕ್ಕೆ ಇಷ್ಟು ಹೇಳಿದರೆ ಸಾಕು.

Ads on article

Advertise in articles 1

advertising articles 2

Advertise under the article

ಸುರ