-->

Expert opinion on Corona Virus | ಕೊರೋನಾ ವೈರಸ್: ದೇಶ ಬಾಂಧವರಿಗೆ ಸಂತಸದ ಸುದ್ದಿ ಪ್ರಕಟಿಸಿದ ತಜ್ಞರ ಅಧ್ಯಯನ

Expert opinion on Corona Virus | ಕೊರೋನಾ ವೈರಸ್: ದೇಶ ಬಾಂಧವರಿಗೆ ಸಂತಸದ ಸುದ್ದಿ ಪ್ರಕಟಿಸಿದ ತಜ್ಞರ ಅಧ್ಯಯನ




ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೊರೋನಾ ಅಲೆ ಬೀಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಕೊರೋನಾ ವೈರಸ್ ಹರಡುವ ಭೀತಿ ಕ್ಷೀಣಿಸಿದೆ. ಮಹಾಮಾರಿಯ ವ್ಯಾಪಕತೆ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಸಮಸ್ಯೆಯಿಂದ ನಾವು ದೂರವಾಗಿಲ್ಲ. ಒಂದು ತೃಪ್ತಿ ಎಂದರೆ ಇದೀಗ ಕೊರೋನಾ ವೈರಸ್ ಸಾಮೂಹಿಕವಾಗಿ ಹರಡುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.



ಪ್ರತಿದಿನದ ಲೆಕ್ಕದಲ್ಲಿ ನೋಡಿದರೆ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿದರೆ, ಎರಡನೇ ಅಲೆಯ ಸಾಧ್ಯತೆ ಕಡಿಮೆಯಾಗಿದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.



ಯೂರೋಪ್‌ನಲ್ಲಿ ಎರಡನೇ ಅಲೆ ಪರಿಣಾಮಕಾರಿಯಾಗಿದೆ. ಜನಜೀವನಕ್ಕೆ ಮೊದಲನೇ ಅಲೆಗಿಂತಲೂ ಹೆಚ್ಚು ಸಮಸ್ಯೆ ಉಂಟು ಮಾಡಿದೆ. ಆದರೆ, ಭಾರತದಲ್ಲಿ ಇಂತಹ ಸಮಸ್ಯೆ ಉಂಟಾಗದು ಎಂದು ವೈರಾಲಜಿಸ್ಟ್ ಡಾ. ಶಹೀದ್ ಜಮಿಲ್ ಅಭಿಪ್ರಾಯಪಟ್ಟಿದ್ದಾರೆ.



ಖ್ಯಾತ ಕ್ಲಿನಿಕಲ್ ವಿಜ್ಞಾನಿ ಡಾ. ಗಗನ್ ದೀಪ್ ಕಾಂಗ್‌ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕೊರೋನಾ ಹರಡುವ ವೇಗ ಕಡಿಮೆಯಾಗಿದೆ. ಅದು ಮೊದಲಿನಷ್ಟು ವ್ಯಾಪಕವಾಗಿ ಹರಡುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article