ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಗು ಬೇಕಿದ್ರೆ ನಿನ್ನ ಹೆಂಡ್ತಿನ ನನ್ನೊಂದಿಗೆ ಕಳಿಸು ಎಂದ ಟಿಸಿಎಸ್ ಟೀಮ್ ಲೀಡರ್: ಕಣ್ಣೀರಿಟ್ಟ ಐಟಿ ಉದ್ಯೋಗಿ


ನಾಸಿಕ್: ಇಲ್ಲಿನ ಟಿಸಿಎಸ್ ಶಾಖೆಯಲ್ಲಿ ಬಯಲಾಗಿರುವ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಒತ್ತಾಯ ಪ್ರಕರಣ ಕಾರ್ಪೊರೇಟ್ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಕೇವಲ ಕೆಲಸದ ಒತ್ತಡದ ಬಗ್ಗೆಯಷ್ಟೇ ಕೇಳು ಬರುತ್ತಿದ್ದ ಐಟಿ ಕ್ಷೇತ್ರದಲ್ಲಿ, ಇದೀಗ ಮತಾಂತರದ ಸಂಚು, ಲೈಂಗಿಕ ದೌರ್ಜನ್ಯ ಮತ್ತು ನೈತಿಕ ಅಧಃಪತನದ ಆಘಾತಕಾರಿ ಕಥೆಗಳು ಹೊರಬರುತ್ತಿವೆ. ಒಂದೆಡೆ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಒತ್ತಾಯ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಟಿಸಿಎಸ್‌ನ ನಾಸಿಕ್ ಶಾಖೆಯ ಪುರುಷ ಉದ್ಯೋಗಿಯೊಬ್ಬರು ತಮಗಾದ ಅಮಾನವೀಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಂತ್ರಸ್ತ ಉದ್ಯೋಗಿ, ಟೀಮ್ ಲೀಡರ್ ತೌಸಿಫ್ ಅತ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ನೀಡಿರುವ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. 2022ರಲ್ಲಿ ತಾನು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆರಂಭವಾದ ಈ ಕಿರುಕುಳ 2026ರ ಮಾರ್ಚ್‌ವರೆಗೆ ಮುಂದುವರೆದಿದೆ.

ಸಂತ್ರಸ್ತ ಉದ್ಯೋಗಿಗೆ ಹಲವಾರು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಈ ಸೂಕ್ಷ್ಮ ವಿಚಾರವನ್ನೇ ಗುರಿಯಾಗಿಸಿಕೊಂಡ ಅವರು, ವೈದ್ಯಕೀಯ ಚಿಕಿತ್ಸೆಯಿಂದ ಮಗು ಪಡೆಯಲು ಸಾಧ್ಯವಿಲ್ಲ, ಮಗು ಬೇಕಾದರೆ ನಿನ್ನ ಹೆಂಡತಿಯನ್ನು ತನ್ನ ಬಳಿಗೆ ಕಳುಹಿಸು ಎಂದು ವಿಕೃತವಾಗಿ ಹೇಳಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.



ಹಿಂದೂ ನಂಬಿಕೆಯುಳ್ಳ ಈ ಉದ್ಯೋಗಿಯು ರುದ್ರಾಕ್ಷಿ ಮಾಲೆ ಧರಿಸುತ್ತಿದ್ದರು. ಅದನ್ನೇ ವಿವಾದ ಮಾಡಿದ್ದ ಇವರು 2023ರ ಈದ್ ಸಂದರ್ಭದಲ್ಲಿ ಸಂತ್ರಸ್ತನನ್ನು ಮನೆಗೆ ಕರೆದೊಯ್ದು, ಬಲವಂತವಾಗಿ ತಲೆಗೆ ಟೋಪಿ ಹಾಕಿ, ನಮಾಜ್ ಮಾಡಿಸಿ ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿ ಅವಮಾನಿಸಲಾಗಿತ್ತು.

ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವುದು, ಗೋಮಾಂಸ ಸೇವಿಸಲು ಒತ್ತಾಯಿಸುವುದು ಮತ್ತು ಕಲ್ಮಾ ಪಠಿಸುವಂತೆ ಪೀಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಆದಾಗ, ನಿಮ್ಮ ತಂದೆ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಆರೋಪಿ ಹೇಳಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಕೇವಲ ಮಾನಸಿಕವಲ್ಲದೆ ದೈಹಿಕವಾಗಿಯೂ ಸಂತ್ರಸ್ತನನ್ನು ಕಾಡಲಾಗಿತ್ತು. ಸಂತ್ರಸ್ತ ಪ್ರತಿಭಟಿಸಿದಾಗ ತೌಸಿಫ್ ಅತ್ತರ್ ಆತನ ಮೇಲೆ ಟೇಬಲ್ ಫ್ಯಾನ್ ಎಸೆದು ಕೊಲ್ಲುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತನನ್ನು ಕೆಲಸದಿಂದ ತೆಗೆಯಲು ಪ್ರಧಾನ ಕಚೇರಿಗೆ ಸುಳ್ಳು ದೂರುಗಳನ್ನು ನೀಡುವ ಮೂಲಕ ಆತನ ವೃತ್ತಿಜೀವನವನ್ನೇ ಹಾಳು ಮಾಡಲು ಈ ತಂಡ ಯತ್ನಿಸಿತ್ತು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೌಸಿಫ್ ಅತ್ತರ್, ಡ್ಯಾನಿಶ್ ಶೇಖ್ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿದಾ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಈ ತಂಡವು ಕೇವಲ ಈತನನ್ನು ಮಾತ್ರವಲ್ಲದೆ, ಮಹಿಳಾ ಉದ್ಯೋಗಿಗಳಿಗೂ ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ಪೀಡಿಸುತ್ತಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದುಬಂದಿದೆ.

ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರಚೋದನೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರ ಒಳಗೆ ಇಂತಹ ಘಟನೆಗಳು ವರ್ಷಗಟ್ಟಲೆ ನಡೆಯುತ್ತಿದ್ದರೂ ಮ್ಯಾನೇಜ್‌ಮೆಂಟ್ ಗಮನಕ್ಕೆ ಬರದಿರುವುದು ಆಶ್ಚರ್ಯದ ಸಂಗತಿಯಾಗಿದೆ.