~ಎಸ್‌ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಜೊತೆಗೂಡಿ ಸುಧಾರಿತ ಡೇಟಾ ರಕ್ಷಣೆ ಮತ್ತು ಹೆಚ್ಚು ಆಳವಾದ ಸಂಯೋಜನೆಗಳನ್ನು ತರುತ್ತಿದೆ ~
ಮಂಗಳೂರು: ಭಾರತದ ಮುಂಚೂಣಿ ವ್ಯಾಪಾರ ಆಟೊಮೇಶನ್ ಸಾಫ್ಟ್‌ವೇರ್ ಸರಬರಾಜುದಾರ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್ ಪ್ರೈ ಲಿ., ಇಂದು TallyPrime Release 7.0ದ ಬಿಡುಗಡೆಯನ್ನು ಘೋಷಿಸಿ ಐದು ವರ್ಷಗಳ ಟ್ಯಾಲಿ ಪ್ರೈಮ್ ವೇದಿಕೆಯನ್ನು ಆಚರಿಸುತ್ತಿದೆ. ತಾನು ಸ್ಥಾಪನೆಗೊಂಡಾಗಿನಿಂದಲೂ ಟ್ಯಾಲಿ ಪ್ರೈಮ್ ಒಂದು ಸ್ಪಷ್ಟವಾದ ಭರವಸೆಯ ಸುತ್ತ ವಿನ್ಯಾಸಗೊಂಡಿದೆ-ಅದು, ಎಮ್‌ಎಸ್‌ಎಮ್‌ಇಗಳಿಗಾಗಿ ಡಿಜಿಟೀಕರಣವನ್ನು ಸರಳ, ವಿಶ್ವಸನೀಯ ಹಾಗೂ ನಿಜವಾಗಿಯೂ ಉಪಯುಕ್ತಗೊಳಿಸುವುದು. ಈ ಮೈಲಿಗಲ್ಲಿನ ಬಿಡುಗಡೆಯು, ಹೆಚ್ಚು ಆಳವಾದ ಸಂಯೋಜನೆಗಳು, ಇನ್ನೂ ಹೆಚ್ಚು ಸ್ಮಾರ್ಟ್ ಆದ ಆಟೋಮೇಶನ್ ಮತ್ತು ಅರ್ಥಪೂರ್ಣ ಡೇಟಾ-ರಕ್ಷಣೆ ವರ್ಧನೆಗಳನ್ನು ಒಟ್ಟುಗೂಡಿಸಿ ಅವುಗಳನ್ನು ಹೆಚ್ಚು ಏಕೀಕೃತ, ಸಂಪರ್ಕಗೊಂಡ ಅನುಭವವನ್ನಾಗಿ ಪರಿವರ್ತಿಸಿದೆ.
ಕಳೆದ ಹಲವಾರು ವರ್ಷಗಳಿಂದ ಟ್ಯಾಲಿ ಪ್ರೈಮ್ ಇ—ಇನ್ವಾಯ್ಸಿಂಗ್ ಮತ್ತು ಇ-ವೇಬಿಲ್ಸ್‌ನಿಂದ ಸಂಪರ್ಕಗೊಂಡ ಜಿಎಸ್‌ಟಿ ಅನುಸರಣೆ ಮತ್ತು ಪ್ರತಿನಿತ್ಯದ ಹಣಕಾಸು ಕಾರ್ಯಾಚರಣೆಗಳವರೆಗೆ, ಭಾರತದ ಅತಿವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಪರಿಸರವನ್ನು ಹಾದುಹೋಗಲು ವ್ಯಾಪಾರ ಸಂಸ್ಥೆಗಳಿಗೆ ನೆರವಾಗುತ್ತಲಿದೆ. ಕನೆಕ್ಟೆಡ್ ಬ್ಯಾಂಕಿ ಮತ್ತು ಟ್ಯಾಲಿಪ್ರೈಮ್ ಕ್ಲೌಡ್ ಆಕ್ಸೆಸ್ ಮುಂತಾದ ಅಂಶಗಳೊಂದಿಗೆ ವ್ಯಾಪಾರ ಸಂಸ್ಥೆಗಳು, ಎಲ್ಲಿಂದಾದರೂ, ಸುರಕ್ಷಿತವಾಗಿ ವ್ಯವಹಾರ ನಡೆಸಿ, ಬಾಹ್ಯ ವ್ಯವಸ್ಥೆಗಳೊಂದಿಗೆ ಅನಾಯಾಸವಾಗಿ ತೊಡಗಿಕೊಳ್ಳುವ ಪರಿವರ್ತನೀಯತೆಯನ್ನು ಆನಂದಿಸುತ್ತಾ ಬಂದಿವೆ.
ರಿಲೀಸ್7.0, ಪ್ರತಿನಿತ್ಯ ಎಮ್‌ಎಸ್‌ಎಮ್‌ಇಗಳು ಅವಲಂಬಿಸುವ ಮೂಲ ಆಧಾರಸ್ತಂಭಗಳಾದ ನಿರಂತರತೆ, ಸ್ಪಷ್ಟತೆ ಮತ್ತು ನಿಯಂತ್ರಣವನ್ನು ಬಲಪಡಿಸುವ ಮೂಲಕಲ ಆಧ್ಚುರುಕುಗೊರತಿನಿತ್ಯದ ಹ್ ಈ ಗ್ರಾಹಕ-ಕೇಂದ್ರಿತ ದೂರದೃಷ್ಟಿಯನ್ನು ಇನ್ನಷ್ಟು ಚುರುಕುಗೊಳಿಸುತ್ತದೆ. ಪ್ರಬಲವಾದ ಎಸ್‌ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಸಂಯೋಜನೆಗಳು ಈಗ ಎಮ್‌ಎಸ್‌ಎಮ್‌ಇಗಳು ಪಾವತಿಗಳನ್ನು ನಿರ್ವಹಿಸಲು, ಬ್ಯಾಲೆನ್ಸ್ ಮತ್ತು ಸ್ಟೇಟ್‌ಮೆಂಟ್‌ಗಳನ್ನು, ಟ್ಯಾಲಪ್ರೈಮ್‌ನಿಂದ ಆಚೆ ಬರದಲೇ, ವಾಸ್ತವ ಸಮಯದಲ್ಲಿ ಪಡೆದುಕೊಳ್ಳಲು ಮತ್ತು ಕೂಡಲೇ ಕ್ರೋಢೀಕರಿಸಲು ನೆರವಾಗುತ್ತದೆ. ಈ ವರ್ಧನೆಗಳು, ನಿತ್ಯದ ಹಣಕಾಸು ಕಾರ್ಯಾಚರಣೆಗಳನ್ನು ಹೆಚ್ಚು ಶೀಘ್ರ, ಹೆಚ್ಚು ಪಾರದರ್ಶಕ ಹಾಗೂ ಹೆಚ್ಚು ವಿಶ್ವಸನೀಯ ಅನುಭವಗಳನ್ನಾಗಿ ಪರಿವರ್ತಿಸುತ್ತವೆ.
ಟ್ಯಾಲಿದ ಸಹಭಾಗಿತ್ವ-ಚಾಲಿತ ದೃಷ್ಟಿಕೋನವು, NPCI Bharat BillPay Ltd.ನೊಂದಿಗೆ ನಿರ್ಮಾಣಗೊಂಡ ಭಾರತ್ ಕನೆಕ್ಟ್ ಫಾರ್ ಬಿಜಿನೆಸ್(ವ್ಯಾಪಾರಕ್ಕಾಗಿ ಭಾರತ ಸಂಪರ್ಕ)ದೊಂದಿಗೂ ಮುಂದುವರಿಯುತ್ತದೆ. ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಯಾಂತ್ರೀಕೃತ ಇನ್ವಾಯ್ಸ್ ವಿನಿಮಯ ಮತ್ತು ಪಾವತಿ ಲಿಂಕೇಜ್‌ನೊಂದಿಗೆ, ಎಮ್‌ಎಸ್‌ಎಮ್‌ಇಗಳು ತಮ್ಮ ಸ್ವೀಕೃತಿಗಳು ಮತ್ತು ಪಾವತಿ ಆವರ್ತನಗಳಾದ್ಯಂತ ಕೈಯಿಂದ ಮಾಡುವ ಪ್ರಯತ್ನವನ್ನು ಕಡಿಮೆ ಮಾಡಿ ನಿಖರತೆಯನ್ನು ಸುಧಾರಿಸಿಕೊಳ್ಳಬಹುದು.
ರಿಲೀಸ್ 7.0, ವ್ಯಾಪಾರ ಡೇಟಾವನ್ನು ಇನ್ನಷ್ಟು ಸುರಕ್ಷಿತ ಹಾಗೂ ಹೆಚ್ಚು ಅವಲಂಬನೀಯಗೊಳಿಸುವ ವರ್ಧಿತ ಟ್ಯಾಲಿಡ್ರೈವ್(TallyDrive) ಅನ್ನು ಕೂಡ ತರುತ್ತಿದೆ. ನವೀಕೃತ ಎನ್ಕ್ರಿಪ್ಷನ್, ಪ್ರಬಲವಾದ ಇಂಟಿಗ್ರಿಟಿ ಚೆಕ್ಸ್ ಮತ್ತು ಡೇಟಾವನ್ನು ಕಟ್ಟುನಿಟ್ಟಾಗಿ ವ್ಯಾಪಾರದ ನಿಯಂತ್ರಣದಲ್ಲೇ ಇರಿಸುವ ವಿನ್ಯಾಸ ಸಿದ್ಧಾಂತದೊಂದಿಗೆ ಟ್ಯಾಲಿಡ್ರೈವ್, ಸಂಪರ್ಕಗೊಂಡ ಕಾರ್ಯಹರಿವುಗಳು ಎಂದಿಗೂ ಖಾಸಗಿತ್ವದೊಡನೆ ರಾಜಿಮಾಡಿಕೊಳ್ಳಬಾರದು ಎಂಬ ಟ್ಯಾಲಿದ ದೀರ್ಘಕಾಲಿಕ ನಂಬಿಕೆಯನ್ನು ಎತ್ತಿಹಿಡಿಯುತ್ತದೆ. ವ್ಯಾಪಾರ ಸಂಸ್ಥೆಗಳು ಡಿಜಿಟಲ್ ಪದ್ಧತಿಗಳನ್ನು ಆತ್ಮವಿಶ್ವಾಸದಿಂದ ಅಳವಡಿಸಿಕೊಂಡು, ತಮ್ಮ ಡೇಟಾ ಸುಭದ್ರವಾಗಿರುತ್ತದೆ, ಬ್ಯಾಕ್ ಅಪ್ ಇರುತ್ತದೆ ಮತ್ತು ಯಾವಾಗಲೂ ಪ್ರವೇಶಾವಕಾಶ ಇರುತ್ತದೆ ಎಂದು ಅರಿತುಕೊಂಡಿರಬಹುದು.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡುತ್ತಾ, ಟ್ಯಾಲಿ ಸಲ್ಯೂಶನ್ಸ್‌ದ ವ್ಯವಸ್ಥಾಪಕ ನಿರ್ದೇಶಕ ತೇಜಸ್ ಗೋಯೆಂಕ ,“ಕಳೆದ ಐದು ವರ್ಷಗಳಿಂದ ಟ್ಯಾಲಿಪ್ರೈಮ್, ತನ್ನ ಸಂಪರ್ಕಗೊಂಡ ಸಾಮರ್ಥ್ಯಗಳನ್ನು ನಿಧಾನವಾಗಿ ವಿಸ್ತರಿಸಿ, ವ್ಯಾಪಾರ ಸಂಸ್ಥೆಗಳು, ಅನುಸರಣೆ, ಬ್ಯಾಂಕಿಂಗ್ ಮತ್ತು ಪ್ರತಿದಿನದ ಕಾರ್ಯಾಚರಣೆಗಳನ್ನು ನಡೆಸುವ ವಿಧಾನವನ್ನು ವರ್ಧಿಸಿದೆ. ಟ್ಯಾಲಿಪ್ರೈಮ್ 7.0 ಈ ಪಯಣದ ಸಹಜ ವಿಸ್ತರಣೆಯಾಗಿದ್ದು, ಹೆಚ್ಚು ಸ್ಮಾರ್ಟ್ ಆದ ಯಾಂತ್ರೀಕರಣ, ಹೆಚ್ಚು ಆಳವಾದ ಸಂಯೋಜನೆಗಳು ಹಾಗೂ ವರ್ಧಿತ ಖಾಸಗಿತ್ವ ಅಂಶಗಳನ್ನು ಪರಿಚಯಿಸುತ್ತದೆ. ಇದು, ಇಂದಿನ ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕಗೊಂಡ ಡಿಜಿಟೀಕರಣವು ಅಗತ್ಯವೇ ಹೊರತು ಸಂಕೀರ್ಣತೆಯಲ್ಲ ಎಂಬ ನಮ್ಮ ನಂಬಿಕೆಯನ್ನು ಪ್ರತಿಫಲಿಸುತ್ತದೆ. ಈ ಬಿಡುಗಡೆಯು ನಾವು ನಿರ್ಮಾಣಮಾಡುತ್ತಲಿರುವ ಪರಿಸರವ್ಯವಸ್ಥೆಯನ್ನು ಬಲಪಡಿಸಿ, ವ್ಯಾಪಾರ ಸಂಸ್ಥೆಗಳು ಹೆಚ್ಚು ನಿರಂತರತೆ, ಪಾರದರ್ಶಕತೆ ಹಾಗೂ ಆತ್ಮವಿಶ್ವಾಸದೊಂದಿಗೆ ಕಾರ್ಯಾಚರಣೆ ನಡೆಸಲು ನೆರವಾಗುತ್ತದೆ.” ಎಂದು ಹೇಳಿದರು.
ರಿಲೀಸ್ 7.0ನೊಂದಿಗೆ ಟ್ಯಾಲಿ, ಎಮ್‌ಎಸ್‌ಎಮ್‌ಇಗಳು ಸಮಯಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳಲು, ನಿರಂತರತೆ ಕಾಪಾಡಿಕೊಳ್ಳಲು ಮತ್ತು ಭಾರತದ ಡಿಜಿಟಲ್ ಪರಿಸರವ್ಯವಸ್ಥೆಗೆ ಅನುಗುಣವಾಗಿರಲು ನೆರವಾಗುವಂತಹ ಒಂದು ಸುಭದ್ರ, ತಕ್ಷಣದ ಹಾಗೂ ಆಳವಾಗಿ ಸಂಪರ್ಕಗೊಂಡ ವೇದಿಕೆಯನ್ನು ಸೃಷ್ಟಿಸಬೇಕೆನ್ನುವ ಅದರ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ನವೀಕರಣಗಳು, ಅನುಸರಣೆ, ಬ್ಯಾಂಕಿಂಗ್, ಪಾವತಿಗಳು ಮತ್ತು ವರದಿಮಾಡುವಿಕೆ ಕೆಲಸಗಳಾದ್ಯಂತ ಸಂಪರ್ಕಗೊಂಡ ಸೇವೆಗಳನ್ನು ಖಾತರಿಪಡಿಸಿ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಲು ನೆರವಾಗುವ ಮೂಲಕ ಎಮ್‌ಎಸ್‌ಎಮ್‌ಇಗಳು ತಮ್ಮ ವ್ಯಾಪಾರಗಳನ್ನು ಸುಲಭವಾಗಿ ಮತ್ತು ಸ್ಪಷ್ಟತೆಯೊಂದಿಗೆ ನಡೆಸಲು ನೆರವಾಗುತ್ತವೆ.
ಟ್ಯಾಲಿಪ್ರೈಮ್ ರಿಲೀಸ್ 7.0, ಸಕ್ರಿಯ ಪರವಾನಗಿ ಇರುವ ಎಲ್ಲಾ ಪ್ರಸ್ತುತದ ಟ್ಯಾಲಿಪ್ರೈಮ್ ಗ್ರಾಹಕರಿಗೆ ಲಭ್ಯವಿರುತ್ತದೆ.