ಹೆಜಮಾಡಿ ನೇಮೋತ್ಸವದಲ್ಲಿ 78 ವರ್ಷದ ವೃದ್ಧೆಯ ಸರ ಕಳ್ಳತನ : ಮೂವರು ಆರೋಪಿಗಳ ಬಂಧನ

ಹೆಜಮಾಡಿ ನೇಮೋತ್ಸವದಲ್ಲಿ 78 ವರ್ಷದ ವೃದ್ಧೆಯ ಸರ ಕಳ್ಳತನ : ಮೂವರು ಆರೋಪಿಗಳ ಬಂಧನ

ಹೆಜಮಾಡಿ ನೇಮೋತ್ಸವದಲ್ಲಿ 78 ವರ್ಷದ ವೃದ್ಧೆಯ ಸರ ಕಳ್ಳತನ : ಮೂವರು ಆರೋಪಿಗಳ ಬಂಧನ

ಪಡುಬಿದ್ರೆ: ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸದಲ್ಲಿ 78 ವರ್ಷದ ವೃದ್ಧೆಯ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ(40) ಬಂಧಿತ ಆರೋಪಿಗಳು.

ಘಟನೆಯ ವಿವರ

ಹೆಜಮಾಡಿಯ ಕಮಲ(78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸಕ್ಕೆ ಹೋಗಿದ್ದರು. ದೈವದ ದರ್ಶನ ಮಾಡಿ ನಂತರ ಅಲ್ಲಿಗೆ ಬಂದ ತನ್ನ ಶಾರದಾ ಪೂಜಾರಿ ಎಂಬವರು ಕಮಲ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೆ ಇರುವ ಬಗ್ಗೆ ತಿಳಿಸಿದರು.

ಸಿಸಿಟಿವಿ ಪರಿಶೀಲನೆ ಮತ್ತು ದೂರು

ಡಿ.25ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಕಮಲ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ ಮತ್ತು ನ್ಯಾಯಾಲಯ

ಅದರಂತೆ ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu