ಮದುವೆಯಾಗು ಎಂದಿದ್ದಕ್ಕೆ ಯುವತಿಯನ್ನ 8 ಬಾರಿ ಚುಚ್ಚಿಕೊಂದ ಪ್ರೇಮಿ

ಬೆಂಗಳೂರಿನಲ್ಲಿ ಯುವತಿಯ ಹತ್ಯೆ

ಮದುವೆಯಾಗು ಎಂದಿದ್ದಕ್ಕೆ ಯುವತಿಯನ್ನ 8 ಬಾರಿ ಚುಚ್ಚಿಕೊಂದ ಪ್ರೇಮಿ

ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಯುವತಿಗೆ 8 ಬಾರಿ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೇಣುಕಾ ಮೃತ ಮಹಿಳೆಯಾಗಿದ್ದು, ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೇಣುಕಾಗೆ ಅದಾಗಲೇ ವಿವಾಹವಾಗಿದ್ದು, ಪತಿಯಿಂದ ದೂರವಾಗಿದ್ದಳು. ಒಂದು ಮಗುವಿನೊಂದಿಗೆ ಬದುಕು ಕಟ್ಟಿಕೊಂಡಿದ್ದ ರೇಣುಕಾಗೆ ಅದೇ ಏರಿಯಾದಲ್ಲಿ ಬ್ಯಾನರ್ ಪ್ರಿಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದ ಕುಟ್ಟಿ ಎಂಬಾತನ ಪರಿಚಯವಾಗಿತ್ತು.
ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗುವಂತೆ ಕುಟ್ಟಿಯನ್ನ ರೇಣುಕಾ ಒತ್ತಾಯಿಸಿದ್ದಳು. ಈ ರೀತಿಯ ಟೈಮ್ಪಾಸ್ ಪ್ರೀತಿ ಬೇಡ ಎಂದಿದ್ದಳು.
ಹೀಗಾಗಿ ನಿನ್ನ ಬಳಿ ಮಾತನಾಡಬೇಕು ಬಾ ಎಂದು ರೇಣುಕಾಳನ್ನ ಕರೆದಿದ್ದ ಆರೋಪಿ, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆ ಬಳಿ ಆಕೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದ.
ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ಕುಟ್ಟಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu