5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು ಕೂಡ ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ

5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು ಕೂಡ ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ

5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು ಕೂಡ ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ

ಘಟನೆಯ ಸಾರಾಂಶ

ಬೆಂಗಳೂರು: ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಬರೆದುಕೊಟ್ಟು ಮಗಳಂತೆ ಸಾಕಿದ್ದವರ ಮನೆಗೆ ಯುವತಿ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧನದ ವಿವರಗಳು

ಮನೆಗೆಲಸದಾಕೆ ಮಂಗಳ ಬಂಧಿತ ಯುವತಿ. ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಚಿನ್ನ ಕಳ್ಳತನ ಮಾಡಿದ್ದಳು. ದೂರು ಆಧರಿಸಿ ತನಿಖೆ ನಡೆಸಿದ ಜೆಪಿ ನಗರ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಮನೆ ಮಾಲಿಕರ ಹಿನ್ನೆಲೆ

ಮನೆ ಮಾಲೀಕರಾದ ಆಶಾ ಜಾಧವ್ ತಾಯಿಗೆ ವಯಸ್ಸಾಗಿತ್ತು. ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಕೇರ್ ಟೇಕರ್ ಆಗಿ ಮಂಗಳರನ್ನು ನೇಮಿಸಿಕೊಂಡಿದ್ದರು. ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳ ಚೆನ್ನಾಗಿ ನೋಡಿಕೊಂಡಿದ್ದಳು. ಇವರ ಪತಿಯೂ ಮೃತಪಟ್ಟಿದ್ದರು. ಪ್ರತಿಷ್ಠಿತ ಜೆಪಿ ನಗರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಇವರು ಹೊಂದಿದ್ದರು.

ಮಗಳಂತೆ ಸಾಕುವುದು ಮತ್ತು ಆಸ್ತಿ ವಿತರಣೆ

ಮಂಗಳಳನ್ನು ಆಶಾ ಅವರು ಮಗಳಂತೆ ಕಾಣುತ್ತಿದ್ದರು. 5 ಕೋಟಿ ಮೌಲ್ಯದ ಮನೆಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದರು. ಕೆಲ ವರ್ಷದ ಹಿಂದೆ ಆಶಾ ಜಾಧವ್ ತಾಯಿ ಕೂಡ ಮೃತಪಟ್ಟರು. ಇದ್ದ ಆಸ್ತಿ ಏನು ಮಾಡಬೇಕು ಎಂದು ಮಂಗಳ ಹೆಸರಿಗೆ ಬರೆದಿದ್ದರು. ಮನೆಯಲ್ಲಿ ಮಂಗಳಳನ್ನ ಮಗಳಂತೆ ಕಾಣುತ್ತಿದ್ದರು. ಆದರೆ, ಆನ್ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಯುವತಿ, ಬಾಯ್ಫ್ರೆಂಡ್ಸ್ ಹಾಗೂ ಪಾರ್ಟಿ, ಪಬ್ಬು ಅಂತಾ ಸುತ್ತಾಡ್ತಿದ್ದಳು. ಅದಕ್ಕಾಗಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದಳು. ಈಕೆ ಮಾಡಿಕೊಂಡಿದ್ದ 40 ಲಕ್ಷ ಸಾಲವನ್ನು ತೀರಿಸಿದ್ದರು. ಅಲ್ಲದೇ ಒಂದೂವರೆ ಕೋಟಿಯ ಮನೆಯನ್ನು ಮಂಗಳ ಹೆಸರಿಗೆ ಬರೆದಿದ್ದರು. ಆನ್ಲೈನ್ ಹುಚ್ಚಿಗೆ ಮನೆ ಮಾರಿ ಮಂಗಳ ಹಣ ಕಳೆದುಕೊಂಡಿದ್ದಳು. ಆದರೂ ಆಕೆಯನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆಶಾ ಸಾಕಿದ್ದರು.

ಕಳ್ಳತನದ ರೀತಿ

ಸದ್ಯ ತಾನು ವಾಸ ಇರುವ ಐದು ಕೋಟಿಯ ಮನೆ ವಿಲ್ ಕೂಡ ಮಂಗಳ ಹೆಸರಿಗೆ ಮಾಡಿದ್ದರು. ಆದರೆ, ಮತ್ತದೇ ಆನ್ಲೈನ್ ಬೆಟ್ಟಿಂಗ್ ಹುಚ್ಚಿಗೆ ಯುವತಿ ಬಿದ್ದಿದ್ದಳು. ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಳು. ಒರಿಜಿನಲ್ ಕೀ ಬಳಸಿ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಳು. ಬಳಿಕ ಕೀ ಗೊತ್ತಿಲ್ಲದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. ಅಯ್ಯೋ ಕೀ ಎಲ್ಲೋ ಕಳೆದುಹೋಗಿದೆ ಎಂದು ಕೆಲ ದಿನ ಮನೆ ಮಾಲೀಕರು ಸುಮ್ಮನಿದ್ದರು. ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದಿದ್ದರು. ಈ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮಂಗಳ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕಳ್ಳತನ ಮಾಡಿ ಅಡಮಾನ ಇಟ್ಟಿದ್ಳು. ಆ ಹಣವನ್ನೂ ಆನ್ಲೈನ್ ಬೆಟ್ಟಿಂಗ್ನಲ್ಲಿ ಕಳೆದಿದ್ದಳು.

ಪೊಲೀಸ್ ತನಿಖೆ ಮತ್ತು ಅನುಮಾನ

ಯಾರೋ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಮನೆ ಮಾಲೀಕೆ ದೂರು ನೀಡಿದ್ದರು. ಮಂಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಆದರೆ ಇದನ್ನು ಮನೆ ಮಾಲೀಕೆ ತಿರಸ್ಕರಿಸಿದರು. ಆಕೆ ಅಂತವಳಲ್ಲ ಆಕೆಯ ಮೇಲೆ ಅನುಮಾನ ಪಡಬೇಡಿ ಎಂದಿದ್ದರು. ಪೊಲೀಸರು ಮಂಗಳ ಸಿಡಿಆರ್ ಪರಿಶೀಲನೆ ನಡೆಸಿದರು. ಈ ವೇಳೆ ಚಿನ್ನ ಅಡಮಾನ ಇಟ್ಟಿದ್ದ ಮೆಸೇಜ್ ಗೊತ್ತಾಗಿದೆ. ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಾಗಲೂ ಆಕೆಯನ್ನ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು ಮನೆ ಮಾಲೀಕೆ.

ಫಲಿತಾಂಶ ಮತ್ತು ವಿಲ್ ವಾಪಸ್

ಆದರೆ, ಎಫ್ಐಆರ್ ದಾಖಲಿಸಿದ್ದ ಪೊಲೀಸರು ಮಂಗಳಳನ್ನು ಬಂಧಿಸಿದ್ದಾರೆ. ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾಳೆ. ಸದ್ಯ ಮಂಗಳಗಾಗಿ ಬರೆದಿದ್ದ ಮನೆಯ ವಿಲ್ ಕೂಡ ಆಶಾ ಜಾಧವ್ ವಾಪಸ್ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲಾ ಮಂಗಳ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಿದ್ದರು. ಪ್ರತಿ ಬರ್ತ್ ಡೇಗೂ ಒಂದೊಂದು ದೇಶಕ್ಕೆ ಕರೆದುಕೊಂಡು ಹೋಗ್ತಿದ್ದರು. ಆಕೆಯ ಮದುವೆ ತಯಾರಿ ಕೂಡ ನಡೆಸಿದ್ದರು. ಒಳ್ಳೆ ಹುಡುಗನನ್ನು ನೋಡಿ ತಾನೆ ಮದುವೆ ಮಾಡಿಸುವ ಯೋಜಿಸಿದ್ದರು. ಹೀಗಿದ್ದರೂ, ಉಂಡ ಮನೆಗೆ ಮಂಗಳ ಕನ್ನ ಹಾಕಿದ ಈ ಕಳ್ಳಿ ಜೈಲು ಸೇರಿದ್ದಾಳೆ.
```