ಎರಡು ಮಕ್ಕಳ ತಾಯಿಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್: ಆಕೆಯಿಂದಲೇ ಮಸಣ ಸೇರಿದ Murder



ತನ್ನ ಪುತ್ರಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಲೀವ್ ಇನ್ ಸಂಗಾತಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಆದರೆ ಕೊಲೆಯಾದ ಯುವಕನ ತಂದೆಯು, ತನ್ನ ಪುತ್ರನ ಹೆಸರಿನಲ್ಲಿದ್ದ ಮನೆಯನ್ನು ವಶಕ್ಕೆ ಪಡೆದುಕೊಳ್ಳುವುದಕ್ಕಾಗಿ ಆಕೆ ಹಾಗೂ ಮಕ್ಕಳು ಸೇರಿ ನನ್ನ ಪುತ್ರನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

46 ವರ್ಷದ ರತ್ನ ಕೊಲೆಗೈದ ಮಹಿಳೆ. 33 ವರ್ಷದ ಇಂಜಿನಿಯರ್ ಸೂರ್ಯ ಪ್ರತಾಪ್ ಸಿಂಗ್ ಕೊಲೆಯಾದ ಆರೋಪಿ.

ಪೊಲೀಸರ ವಿಚಾರಣೆ ವೇಳೆ ರತ್ನಾಳು, ತನ್ನ ಲಿವ್ ಇನ್ ಸಂಗಾತಿ ಸೂರ್ಯ ಪ್ರತಾಪ್ ತನ್ನ ಹಿರಿಯ ಪುತ್ರಿನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಆಕೆ ವಿರೋಧಿಸಿದಾಗ ಆಕೆಯನ್ನು ಥಳಿಸಿದ್ದಾನೆ. ಡಿಸೆಂಬರ್ 7ರಂದು ಆಕೆಯನ್ನು ರೂಮ್‌ಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ರತ್ನಾ ಹಾಗೂ ಕಿರಿಯ ಮಗಳು ಮಧ್ಯಪ್ರವೇಶಿಸಿದ್ದು, ಇದೇ ವೇಳೆ ರತ್ನ ಸೂರ್ಯನ ಕತ್ತಿಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದೇನೆ ಎಂದಿದ್ದಾಳೆ

ಇತ್ತ ವಿಚಾರಣೆ ನಡೆಸಿದ ಪೊಲಿಸರಿಗೆ ಸೂರ್ಯ ರತ್ನಾಳ ಹೆಣ್ಣು ಮಕ್ಕಳನ್ನು ಬಂಧಿಸಿ, ಮೂರು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲ್ವಿಚಾರಣೆ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ಅವನು ಆ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಿದ್ದ ಮತ್ತು ಹಿರಿಯ ಮಗಳ ಶಿಕ್ಷಣವನ್ನು ವಿಳಂಬಗೊಳಿಸಿ, ಈ ವರ್ಷ ಆಕೆಯನ್ನು12 ನೇ ತರಗತಿಗೆ ಸೇರಿಸಿದ್ದ. ಈ ದೀರ್ಘಕಾಲದ ನಿಯಂತ್ರಣವು ಹೆಣ್ಣುಮಕ್ಕಳು ಮತ್ತು ರತ್ನ ಇಬ್ಬರಿಗೂ ಸೂರ್ಯನ ಮೇಲೆ ಕೋಪ ಹೆಚ್ಚಾಗಲು ಕಾರಣ ಆಯ್ತು ಎಂದು ವರದಿಯಾಗಿದೆ.

ಮತ್ತೊಂದೆಡೆ ಸೂರ್ಯ ತನ್ನ ಸ್ವಂತ ಭೂಮಿಯ ಮೇಲೆ ನಿರ್ಮಿಸಿದ್ದ ಮನೆಯಲ್ಲಿ ವಾಸ ಮಾಡುತ್ತಿದ್ದ. ಆದರೆ ಈ ಮನೆ ನಿರ್ಮಾಣಕ್ಕೆ ರತ್ನ ಆರ್ಥಿಕ ನೆರವು ನೀಡಿದ್ದಳು ಆಕೆಯ ಮೊದಲ ಪತಿಯ ಸಾವಿನ ನಂತರ ಬಂದ ಹಣವನ್ನು ಆಕೆ ಆ ಮನೆ ನಿರ್ಮಾಣ ಕೆಲಸಕ್ಕೆ ಹಾಕಿದ್ದಳು. ಆದರೆ ಈ ಮನೆ ಹಾಗೂ ಒಂದು ಕಾರಿನ ಮಾಲೀಕತ್ವವನ್ನು ತನ್ನ ಹೆಸರಿಗೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರತ್ನ ಹಾಗೂ ಸೂರ್ಯಕುಮಾರ್ ಮಧ್ಯೆ ಆಗಾಗ ಗಲಾಟೆಗಳಾಗುತ್ತಿದ್ದವು ಎಂದು ತಿಳಿದು ಬಂದಿದೆ.

ಸೂರ್ಯ ಜಾನಕಿಪುರ ನಿವಾಸಿಯಾಗಿದ್ದು,ರತ್ನಾಳನ್ನು 2012ರಲ್ಲಿ ಆಕೆಯ ಮಕ್ಕಳಿಬ್ಬರಿಗೆ ಟ್ಯೂಷನ್ ನೀಡುತ್ತಿದ್ದ ವೇಳೆ ಮೊದಲ ಬಾರಿ ಭೇಟಿಯಾಗಿದ್ದ. ಆಕೆ ಆಗ ಆಕೆಯ ಕುಡಕ ಪತಿ ರಾಜೇಂದ್ರನಿಂದ ದೂರಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಆಕೆಯ ಪತಿ ರಾಜೇಂದ್ರ ಎರಡು ವರ್ಷದ ನಂತರ 2014ರಲ್ಲಿ ಸಾವಿಗೀಡಾಗಿದ್ದರು. ಇದೇ ಸಮಯದಲ್ಲಿ ಸೂರ್ಯ ಸಲಾರ್‌ಗಂಜ್‌ನ ಗ್ರೀನ್ ಸಿಟಿಯಲ್ಲಿ ಮನೆಯೊಂದನ್ನು ನಿರ್ಮಾಣ ಮಾಡಿದ್ದ. ಈ ಮನೆಗೆ ರತ್ನ ಹಾಗೂ ಆಕೆಯ ಇಬ್ಬರು ಮಕ್ಕಳು ಬಂದು ಆತನೊಂದಿಗೆ ವಾಸ ಮಾಡಲು ಆರಂಭಿಸಿದ್ದರು.

ಸೂರ್ಯನ ತಂದೆ ನರೇಂದ್ರ ಅವರ ಪ್ರಕಾರ, ಸೂರ್ಯನ ಆದಾಯವನ್ನು ರತ್ನ ಹಾಗೂ ಆಕೆಯ ಮಕ್ಕಳು ಬಳಸಿಕೊಳ್ಳುತ್ತಿದ್ದರು. ಈ ನಡುವೆ ಸೂರ್ಯ ಬೇರೆಡೆ ಯಾರನ್ನಾದರು ಮದುವೆಯಾಗುವುದಕ್ಕೆ ನಿರ್ಧಾರ ಮಾಡಿದ್ದ. ಈ ಬಗ್ಗೆ ಆತ ತಂದೆಯ ಜೊತೆ ಮಾತನಾಡಿ, ಅವರಿಗೆ ಡಿಸೆಂಬರ್ 7ರಂದು ಹಣವನ್ನು ಕಳುಹಿಸಿದ್ದ. ಅದೇ ದಿನ ರಾತ್ರಿ ಆತನ ಕೊಲೆ ನಡೆದಿದ್ದು, ಮದುವೆಯಾಗಲು ಬಯಸಿದವ ಮಸಣ ಸೇರಿದ್ದಾನೆ.

ನಿನ್ನೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಡಿಸೆಂಬರ್‌ 7 ರಂದು ರಾತ್ರಿ 11 ಗಂಟೆಗೆ ಈ ಕೊಲೆ ನಡೆದಿದ್ದು, ಮರು ಮರುದಿನ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದ ಆರೋಪಿ ರತ್ನ ಸೂರ್ಯಪ್ರಕಾಶ್‌ನ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ರಾತ್ರಿ ಕೊಲೆ ಮಾಡಿ ಅಮ್ಮ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇಡೀ ದಿನ ರಾತ್ರಿ ಶವದೊಂದಿಗೆಯೇ ರಾತ್ರಿ ಕಳೆದು ಮರುದಿನ ಬೆಳಗ್ಗೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಇದಾದ ನಂತರವೇ ಪೊಲೀಸರು ರತ್ನಾ ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಎಸಗಿದ ಕೃತ್ಯದ ಬಗ್ಗೆ ಆಕೆಗೆ ಯಾವುದೇ ಪಶ್ಚಾತಾಪ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದಾದ ನಂತರವೇ ಸೂರ್ಯ ಪ್ರತಾಪ್ ಸಿಂಗ್ ಅವರ ತಂದೆ ನರೇಂದ್ರ ಸಿಂಗ್ ಅವರು, ಸೂರ್ಯನ ಲೀವಿಂಗ್ ಪಾರ್ಟನರ್ ಆದ ರತ್ನಾ ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ರತ್ನಾಳ ಗಂಡ ಜನಗಣತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಾವಿನ ನಂತರ ಆಕೆಗೆ ತಿಂಗಳಿಗೆ 35,000 ರೂಪಾಯಿ ಪೆನ್ಷನ್ ಹಣ ಬರುತ್ತಿತ್ತು.

ಇತ್ತ ಸೂರ್ಯ ಪ್ರತಾಪ್ ಅವರ ತಂದೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ ಆತನ ತಾಯಿ ಗೃಹಿಣಿಯಾಗಿದ್ದರು. ಆತನಿಗೆ ವಿವಾಹಿತರಾದ ಇಬ್ಬರು ಸೋದರಿಯರಿದ್ದಾರೆ. ರತ್ನಗೆ ಮೊದಲ ಪತಿಯಿಂದ ಇಬ್ಬರು ಮಕ್ಕಳಿದ್ದು, ಆಕೆಗೆ ಗಂಡನ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ವಿವಾಹಿತ ಎರಡು ಮಕ್ಕಳ ತಾಯಿಯ ಸಹವಾಸ ಮಾಡಿದವ ಮಸಣ ಸೇರುವಂತಾಗಿದೆ.