ಬಂಟ್ವಾಳ: ಸಂಚಾರ ನಿಯಮ ಮೀರಿ ಕಬ್ಬಿಣದ ಸರಕುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಮೇಲೆ ಬಂಟ್ವಾಳ ಸಂಚಾರ ಠಾಣಾ ಪೊಲೀಸರು 1,000ರೂ. ದಂಡ ವಿಧಿಸಿದ್ದಾರೆ.
ಬಂಟ್ವಾಳದ ಬೋಳಂತೂರು ಎಂಬಲ್ಲಿ ಗೂಡ್ಸ್ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ, ಅಪಾಯಕಾರಿಯಾಗಿ ಸಾಮಾಗ್ರಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಸಣ್ಣ ಏರು ಪ್ರದೇಶದಲ್ಲಿ ಸಂಚಾರದಲ್ಲಿದ್ದಾಗಲೇ ಕಬ್ಬಿಣದ ರಾಡ್‌ಗಳು ವಾಹನದಿಂದ ರಸ್ತೆಗೆ ಬಿದ್ದಿದೆ. ಈ ದೃಶ್ಯ ಹಿಂದಿನಿಂದ ಬರುತ್ತಿದ್ದ ಕಾರೊಂದರ ಡ್ಯಾಶ್‌ಬೋರ್ಡ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನಕ್ಕೆ ಸಂಚಾರ ನಿಯಮದನ್ವಯ ಸಾವಿರ ರೂ. ದಂಡ ವಿಧಿಸಲಾಗಿರುತ್ತದೆ.