ಮಹಿಳೆ ಶವ ಹೂತಿಟ್ಟಿದ್ದ ಕೇಸ್‌ಗೆ ಟ್ವಿಸ್ಟ್; ಈ ಕೊಲೆಗೂ ಲವ್ವೆ ಕಾರಣ

 





ಹೊಳೆ ದಡದಲ್ಲಿ  ಮಹಿಳೆಯ ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು,  ಪ್ರಿಯಕರನಿಂದಲೇ ಭೀಕರ ಹತ್ಯೆ ನಡೆದು ಹೋಗಿದೆ ಎಂದು ತಿಳಿದುಬಂದಿದೆ.

ಸೋನಾಕ್ಷಿ ಎಂಬಾಕೆ ಸಾವನ್ನಪ್ಪಿದ  ಮಹಿಳೆ. ಗಂಡ, ಮಕ್ಕಳನ್ನು ಬಿಟ್ಟು ಹೋಗಿದ್ದ ಈಕೆ  ಹೆಣವಾಗಿದ್ದಾಳೆ. ಈಕೆ ಜೊತೆ ಮಾದೇಶ ಎಂಬ ವ್ಯಕ್ತಿ ಪ್ರೀತಿಯಲ್ಲಿದ್ದನು. ಆದರೆ, ಮಾದೇಶನಿಗೂ ಕೈಕೊಟ್ಟು ಮತ್ತೋರ್ವನ  ಸಂಬಂಧ ಬೆಳೆಸಿದ್ದಳು. ಕೊಳ್ಳೇಗಾಲದಿಂದ ಹೋಗಿ ಟಿ. ನರಸೀಪುರದಲ್ಲಿ ಸೋನಾಕ್ಷಿ ವಾಸವಿದ್ದಳು.

ಈ ವಿಚಾರವನ್ನ ಸೋನಾಕ್ಷಿ ಕುಟುಂಬಸ್ಥರಿಗೆ ಮಾದೇಶ ತಿಳಿಸಿದ್ದಾನೆ. ಈ ವಿಚಾರಕ್ಕೆ ಮಾದೇಶ ಹಾಗೂ ಸೋನಾಕ್ಷಿ ನಡುವೆ ಕಿರಿಕ್ ಆಗಿತ್ತು. ನಾಲ್ಕು ದಿನಗಳ ಹಿಂದೆ ಸೋನಾಕ್ಷಿಯನ್ನು ಆರೋಪಿ ಮಾದೇಶ ಮನೆಗೆ ಕರೆಸಿಕೊಂಡಿದ್ದ. ಪರಸ್ಪರ ಮಾತು ಬೆಳೆದು ಜಗಳ ಶುರುವಾಗಿತ್ತು. ಕೋಪದಲ್ಲಿ ಸೋನಾಕ್ಷಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಮಾದೇಶನ ಏಟಿಗೆ ಸ್ಥಳದಲ್ಲೇ ಸೋನಾಕ್ಷಿ ಸಾವನ್ನಪ್ಪಿದ್ದಾಳೆ.  ಮರಣದ ಬಳಿಕ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರದ ಸನಿಹದ ಸುವರ್ಣಾವತಿ ಹೊಳೆಯ ಬಳಿ ತಂದು ಮೃತದೇಹವನ್ನು ಈತ ಹೂತು ಹೋಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu