ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಎನ್ಎಸ್‌ಯುಐ ದ.ಕ.ಜಿಲ್ಲಾ ಉಪಾಧ್ಯಕ್ಷ ಸೇರಿ ಇಬ್ಬರು ಸಾವು


ಮಂಗಳೂರು: ನಗರದ ಜಪ್ಪಿನಮೊಗರು ಬಳಿ ಮಂಗಳವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎನ್ಎಸ್‌ಯುಐ ದ.ಕ.ಜಿಲ್ಲಾ ಉಪಾಧ್ಯಕ್ಷ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. 

ಎನ್ಎಸ್‌ಯುಐ ದ.ಕ.ಜಿಲ್ಲಾ ಉಪಾಧ್ಯಕ್ಷ, ದೇರೆಬೈಲ್ ನಿವಾಸಿ ಓಂ ಶ್ರೀ ಪೂಜಾರಿ(24) ಹಾಗೂ ಅಮನ್ ರಾವ್(23) ಎಂಬವರು ಮೃತಪಟ್ಟವರು.


ಓಂ ಶ್ರೀ ಪೂಜಾರಿ ಹಾಗೂ ಉಳಿದ ನಾಲ್ವರು ಸ್ನೇಹಿತರು ಮಂಗಳವಾರ ತಡರಾತ್ರಿ 2ಗಂಟೆ ಸುಮಾರಿಗೆ ತಲಪಾಡಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದರು‌. ಜಪ್ಪಿನಮೊಗರುವಿಗೆ ಬರುತ್ತಿದ್ದಂತೆ ಚಾಲಕ ಅಮನ್ ರಾವ್ ಅವರ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಪಲ್ಟಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರು ಚಾಲಕನ ಸೀಟ್‌ನಲ್ಲಿದ್ದ ಅಮನ್ ರಾವ್ ಹಾಗೂ ಚಾಲಕನ ಹಿಂಭಾಗದ ಸೀಟ್‌ನಲ್ಲಿದ್ದ ಓಂ ಶ್ರೀ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಕಾರಿನಲ್ಲಿ ಮತ್ತೆ ಮೂವರಿದ್ದು, ಅಪಘಾತದಲ್ಲಿ ಓರ್ವನ ಬೆನ್ನು ಮೂಳೆ ಮುರಿದಿದ್ದು, ಮತ್ತೋರ್ವರ ಕಾಲು ಮುರಿತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಇಟಲಿಯನ್ ಪ್ರಜೆಯಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ. ಸದ್ಯ ಮೃತದೇಹವನ್ನು ಎ.ಜೆ.ಆಸ್ಪತ್ರೆಗೆ ರವಾನಿಸಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu