ನೀನ್ಯಾಕೆ ಸಾಯ್ಬಾರ್ದು ಎಂದು ಪತಿ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ !

 



ಪತಿ ನೀನ್ಯಾಕೆ ಸಾಯ್ಬಾರ್ದು ಎಂದು ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. 4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಲ್ಲವನ್ನೂ ಫೋನ್ನಲ್ಲಿ ರೆಕಾರ್ಡ್ ಮಾಡಿರುವ ಈಕೆ  ತನ್ನ ಪತಿ, ಮಾವ ಮತ್ತು ಅತ್ತಿಗೆ ವಿರುದ್ಧ ಆರೋಪಿಸಿದ್ದಾಳೆ.

 

ಅಮ್ರೀನ್ ಜಹಾನ್ ಸುಮಾರು 4 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅವರ ಗಂಡ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರೆ,  ಅಮ್ರೀನ್ ಅವರು ತನ್ನ ಕುಟುಂಬದೊಂದಿಗೆ ಮೊರಾದಾಬಾದ್ನಲ್ಲಿ ವಾಸಿಸುತ್ತಿದ್ದರು. ಗರ್ಭಪಾತವಾದ ನಂತರ ತನ್ನ ಅತ್ತೆ-ಮಾವನವರು ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.

ಮಾಡುವ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ, ನಾನು ಮಲಗುವ ಕೋಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತ ಮಾಡುತ್ತಾರೆ.ನನ್ನ ಅತ್ತಿಗೆ ಖತೀಜಾ, ನನ್ನ ಮಾವ ಶಾಹಿದ್ ನನ್ನ ಸಾವಿಗೆ ಕಾರಣರಾಗಿದ್ದಾರೆ.ನನ್ನ ಗಂಡ ಕೂಡ ಭಾಗಶಃ ಜವಾಬ್ದಾರ. ಅವನು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಎಲ್ಲವೂ ನನ್ನ ತಪ್ಪು ಎಂದು ಅವನು ಕೂಡ ಭಾವಿಸುತ್ತಾನೆ ಎಂದು ಆರೋಪಿಸಿದ್ದಾರೆ.

ಅವನ ತಂದೆ ಮತ್ತು ತಂಗಿ ಆತನಿಗೆ ಹೇಳಿದ್ದನ್ನು ಮಾತ್ರ ಆತ ಕೇಳುತ್ತಾನೆ. ಇದೆಲ್ಲವನ್ನೂ ನನಗೆ ಸಹಿಸಿಕೊಂಡಿರಲಾಗದು ಎಂದು ಹೇಳಿದ್ದಾಳೆ. ಗಂಡ ಮತ್ತು ಅತ್ತೆ ,ಮಾವ ನನಗೆ ಸಾಯುವಂತೆ ಒತ್ತಡ ಹೇರಿದ್ದರು. ನನ್ನ ಗಂಡ ನನ್ನ ಬಳಿ ನೀನು ಯಾಕೆ ಸಾಯಬಾರದು ಎಂದು ಕೇಳಿದ್ದನು. ತಾನು ಅಸ್ವಸ್ಥಳಾಗಿದ್ದಾಗ ಚಿಕಿತ್ಸೆಗೆ ಹಣ ನೀಡುವ ಮೂಲಕ ತಪ್ಪು ಮಾಡಿದ್ದೇವೆ ಎಂದು ತನ್ನ ಅತ್ತೆ-ಮಾವ ಹೇಳಿದ್ದರು. ಅವರು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸಲು ನನ್ನಲ್ಲಿ ಕೇಳಿದ್ದರು.ಆದರೆ ನನ್ನ ಬಳಿಯಾಗಲಿ ಗಂಡನ ಬಳಿಯಾಗಲೀ ಅಷ್ಟು ಹಣವಿಲ್ಲ, ಇದ್ದಿದ್ದರೆ ನಿಮ್ಮ ಬಳಿ ಏಕೆ ಕೇಳುತ್ತಿದ್ದೆ ಎಂದು ಮಹಿಳೆ ಉತ್ತರ ಕೊಟ್ಟಿದ್ದಾಗಿ ಬರೆದಿದ್ದಾಳೆ.

ಪೊಲೀಸರು ಅಮ್ರೀನ್  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಯ ತಂದೆ ಸಲೀಂ ಪೊಲೀಸ್ ದೂರು ದಾಖಲಿಸಿದ್ದಾರೆ. ಅಮ್ರೀನ್ ನಿನ್ನೆ ತನಗೆ ಕರೆ ಮಾಡಿ ಅಳುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.ತನ್ನ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ ಮತ್ತು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

 

BREAKING NEWS
Loading latest news...
Join our WhatsApp Channel Powered By : Online Pudu