ಮಂಗಳೂರು: ನಿಶ್ಚಿತಾರ್ಥ ಮಾಡಿಕೊಂಡ "ಚಾರ್ಲಿ 777" ಸಿನಿಮಾ ನಿರ್ದೇಶಕ ಕಿರಣ್‌ರಾಜ್‌


ಮಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ ಸೂಪರ್ ಹಿಟ್ ಸಿನಿಮಾ "ಚಾರ್ಲಿ 777'' ನಿರ್ದೇಶಕ ಕಿರಣ್ ರಾಜ್‌ ರವಿವಾರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡರು.

ಅನಯ ವಸುಧಾ ಎಂಬ ಹುಡುಗಿಯೊಂದಿಗೆ ಮಂಗಳೂರಿನ ದಿ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ  ಉಂಗುರ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು.ಈ ಸಂದರ್ಭ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು. 


ಕಿರಣ್ ಮಂಗಳೂರು ಗಡಿಭಾಗ ಕಾಸರಗೋಡು ಮೂಲದವರಾಗಿದ್ದು, ಅನಯ ವಸುಧಾ ಕೂಡ ಕಾಸರಗೋಡು ಮೂಲದವರಾಗಿದ್ದಾರೆ‌. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾವನ್ನು ಕಿರಣ್ ನಿರ್ದೇಶನ ಮಾಡಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ವಿಭಿನ್ನ ಕಥಾ ಹಂದರವಿದ್ದ, ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿ ಕಿರಣ್ ಅವರಿಗೆ ಚಂದನವನದಲ್ಲಿ ಹೆಸರು ತಂದುಕೊಟ್ಟಿತ್ತು..
BREAKING NEWS
Loading latest news...
Join our WhatsApp Channel Powered By : Online Pudu