ಲೆಹಂಗಾ ತೊಟ್ಟು ಸ್ವಿಮ್ಮಿಂಗ್ ಫೂಲ್‌ನಲ್ಲಿ ಕುಳಿತು ತಾವರೆ ಹಿಡಿದು ಪೋಸ್ ಕೊಟ್ಟ ಕಣ್ಣಸನ್ನೆ ಸುಂದರಿ ಪ್ರಿಯಾ ವಾರಿಯರ್



ಕೇರಳ: ಕೇವಲ ತನ್ನ ಕಣ್ಣಸನ್ನೆಯೊಂದರ ಮೂಲಕವೇ ಪಡ್ಡೆಹುಡುಗರ ಮನಸು ಕದ್ದ ‘ಓರು ಅಡಾರ್‌ ಲವ್‌’ ಸಿನಿಮಾ ಬೆಡಗಿ ಪ್ರಿಯಾ ಪ್ರಕಾಶ್‌ ವಾರಿಯರ್‌ ತಮ್ಮ ಹೊಸ ಬೋಲ್ಡ್‌ ಫೋಟೋಗಳ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. 

ತನ್ನ ಆಕರ್ಷಕ ಕಣ್ಣುಹೊಡೆಯುವುದರ ಮೂಲಕ ರಾತ್ರೋರಾತ್ರಿ ಫೇಮಸ್‌ ಆದ ಚೆಲುವೆ ಕೇರಳದ ಪ್ರಿಯಾ ಪ್ರಕಾಶ್‌ ವಾರಿಯರ್‌. 2018ರ ವರ್ಷದ ಕೊನೆಯಲ್ಲಿ ಭಾರತದಲ್ಲಿ ಯಾರು ಹೆಚ್ಚಾಗಿ ಹುಡುಕಾಡಲ್ಪಟ್ಟ ವ್ಯಕ್ತಿ ಎಂದು ಗೂಗಲ್‌ ಹಾಕಿದ ಪ್ರಶ್ನೆಗೆ ಸಿಕ್ಕ ಉತ್ತರವೂ ಇದೇ ಪ್ರಿಯಾ ಪ್ರಕಾಶ್‌ ವಾರಿಯರ್‌ ಆಗಿದ್ದಾರೆ.


ಇದೀಗ ದೀಪಾವಳಿ ಹಬ್ಬದ ಹಿನ್ನೆಲೆ ಲೆಹಂಗಾ ತೊಟ್ಟು ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಕೂತು ತಾವರೆ ಹೂವನ್ನು ಹಿಡಿದು ಸೆನ್ಸೇಷನಲ್ ಪೋಸ್ ಕೊಟ್ಟಿದ್ದಾರೆ ಪ್ರಿಯಾ ಪ್ರಕಾಶ್‌ ವಾರಿಯರ್‌. ಇವದು ನಾಯಕಿಯಾಗಿ ನಟಿಸಿರುವ ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾ ಇನ್ನೂ ತೆರೆಗೆ ಬಂದಿಲ್ಲ.

ಬೆಳ್ಳಿತೆರೆಯನ್ನು ಅಲುಗಾಡಿಸಲೆಂದೇ ಇಂಡಸ್ಟ್ರಿಗೆ ಕಾಲಿಟ್ಟ ಈ ಬ್ಯೂಟಿಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೂ ಹಿಟ್ ಚಿತ್ರ ಸಿಗದೇ ಕಂಗಾಲಾಗಿದ್ದಾರೆ. ಹಾಗಾಗಿಯೇ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಹೊಸ ಪೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. 


ಸಿನಿ ಇಂಡಸ್ಟ್ರಿಗೆ ಹೊಸ ಹೀರೋಯಿನ್‌ಗಳ ಎಂಟ್ರಿ ಸಂಖ್ಯೆ ಹೆಚ್ಚುತ್ತಲೇ ಇರುವಾಗ ಹಿಟ್ ಚಿತ್ರಗಳಿಲ್ಲದ ಪ್ರಿಯಾ ಪ್ರಕಾಶ್ ವಾರಿಯರ್‌‌ಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಇದರೊಂದಿಗೆ, ಅವರು Instagram ನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತಮ್ಮ ಫಾಲೋವರ್ಸ್ ಜೊತೆಗೆ ಸಂಪರ್ಕದಲ್ಲಿರುತ್ತಾರೆ. 

ಪ್ರಿಯಾ ಪ್ರಕಾಶ್ ಅವರು ಸೆನ್ಸೇಷನಲ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಹಲವಾರು ಸಲ ನಟಿ ತಮ್ಮ ಫೋಟೋಶೂಟ್ ಮೂಲಕ ನೆಟ್ಟಿಗರ ಮನಸು ಗೆದ್ದಿದ್ದಾರೆ.