-->
ನಿಮ್ಮಲ್ಲಿ 2ರೂ. ನೋಟು ಇದೆಯೇ ಹಾಗಾದರೆ ಇನ್ನೇಕೆ ತಡ ಅದನ್ನು ಮಾರಿ 5ಲಕ್ಷ ಸಂಪಾದಿಸಿ - ಆದರೆ ಒಂದು ಷರತ್ತು

ನಿಮ್ಮಲ್ಲಿ 2ರೂ. ನೋಟು ಇದೆಯೇ ಹಾಗಾದರೆ ಇನ್ನೇಕೆ ತಡ ಅದನ್ನು ಮಾರಿ 5ಲಕ್ಷ ಸಂಪಾದಿಸಿ - ಆದರೆ ಒಂದು ಷರತ್ತು


ನವದೆಹಲಿ: ನಿಮ್ಮಲ್ಲಿ ಕೇವಲ 2ರೂ. ನೋಟು ಇದ್ದರೆ ಸಾಕು ಕುಳಿತಲ್ಲೇ 5 ಲಕ್ಷ ರೂ. ಸಂಪಾದಿಸಬಹುದು. ಅಚ್ಚರಿ ಎನಿಸಿದರೂ ಸತ್ಯವಾಗಿಯೂ ಇದು ನಿಜ. 

ಹೌದು, ನಿಮ್ಮ ಬಳಿ ಹಳೆಯ 2ರೂ. ನೋಟು ಇದ್ದರೆ ಅದನ್ನು ಬಳಸಿ 5 ಲಕ್ಷ ಗಳಿಸಬಹುದು. ಕೆಲ ಹಳೆಯ ವಸ್ತುಳಿಗೆ ಈ ಆಧುನಿಕ ಜಗತ್ತಿನಲ್ಲಿ ಭಾರೀ ಬೇಡಿಕೆಯಿದೆ. ಅದರಲ್ಲೂ ಹಳೆಯ ನೋಟುಗಳಿಗಂತೂ ಎಲ್ಲಿಲ್ಲದ ಬೇಡಿಕೆ. ನಮ್ಮಲ್ಲಿರುವ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲೆಂದೇ ಕೆಲವು ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಹಳೆಯ ನಾಣ್ಯ ಮತ್ತು ನೋಟನ್ನು ಮಾರಿ ಹಣ ಪಡೆಯಬಹುದು. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ನೀವೇನಾದರೂ ತುಂಬಾ ಅದೃಷ್ಟವಂತರಾಗಿದ್ದರೆ, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷಾಧಿಪತಿ ಆಗಬಹುದು. ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ ನಿಮಗೂ ಆ ಅವಕಾಶವಿದೆ. ನೀವು ಎಲ್ಲಿಯೂ ಪ್ರಯಾಣಿಸದೆ ಕುಳಿತಲ್ಲೇ ಹಳೆಯ ನೋಟನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಅಂದರೆ, ಆನ್‌ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್, ಕಾಯಿನ್ ಬಜಾರ್, ಕ್ವಿಕರ್, Pinterest, OLX ನಲ್ಲಿ ನೋಟುಗಳನ್ನು ಮಾರಾಟ ಮಾಡಬಹುದು.

2 ರೂಪಾಯಿ ನೋಟನ್ನು ಮಾರಾಟ ಮಾಡುವ ಮುನ್ನ ಕೆಲವು ಷರತ್ತುಗಳಿದೆ. ಅದೇನೆಂದರೆ, ನೋಟಿನಲ್ಲಿರುವ ಕ್ರಮಸಂಖ್ಯೆಯಲ್ಲಿ 786 ನಂಬರ್ ಇರಬೇಕು. ಇಸ್ಲಾಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಂಖ್ಯೆಯ ನೋಟಿದ್ದರೆ ಕೆಲವರು ಭಾರಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ.

ಇದಿಷ್ಟೇ ಅಲ್ಲದೆ, ನೋಟಿನ ಬಣ್ಣ ಗುಲಾಬಿ ಬಣ್ಣದ್ದಾಗಿರಬೇಕು ಮತ್ತು ಆರ್‌ಬಿಐ ಮಾಜಿ ಗವರ್ನರ್ ಮನಮೋಹನ್ ಸಿಂಗ್ ಅವರ ಸಹಿಯನ್ನು ಹೊಂದಿರಬೇಕು. ಈ ಎಲ್ಲ ಷರತ್ತುಗಳನ್ನು ನಿಮ್ಮ ನೋಟು ಪೂರೈಸುವುದಾದರೆ, OLX ವೆಬ್‌ಸೈಟ್ ತೆರೆದು, ನೀವು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ನೋಟಿನ ಎರಡೂ ಬದಿಯ ಫೋಟೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿದರೆ, ಹೇಳಿದ ಕರೆನ್ಸಿ ನೋಟು ಅಗತ್ಯವಿರುವವರು ನಿಮ್ಮನ್ನು ಸಂಪರ್ಕಿಸಿ, ಹಣ ಕೊಟ್ಟು ಖರೀದಿ ಮಾಡುತ್ತಾರೆ. 

Ads on article

Advertise in articles 1

advertising articles 2

Advertise under the article