ಅಪರೂಪದ ಕಾಳಿಂಗ ಸರ್ಪದ ರಕ್ಷಣೆ ಮಾಡಿದ ಡಾ.ಪಿ.ಗೌರಿ ಶಂಕರ್.



ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದಲ್ಲಿ ಸುಮಾರು 12.5 ಕೆಜಿ ತೂಕದ 15 ಅಡಿ ಉದ್ದದ ಅಪರೂಪದ 
ಕಾಳಿಂಗ ಸರ್ಪವನ್ನು ಹರ್ಪಿಟಾಲಜಿಸ್ಟ್ ಡಾ.ಪಿ.ಗೌರಿ ಶಂಕರ್ ಅವರು ರಕ್ಷಣೆ ಮಾಡಿದ್ದಾರೆ. 
ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ. ಥೈಲ್ಯಾಂಡ್‌ನಲ್ಲಿ 18 ಅಡಿಗಳಷ್ಟು ಉದ್ದವನ್ನು ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವುಗಳಾಗಿವೆ.
ಫೆಬ್ರುವರಿಯಿಂದ ಮೇ ತಿಂಗಳು ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಹಾವುಗಳು ತನ್ನ ಸಂಗಾತಿಯನ್ನು ಅರಸಿ ಹೊರಬರುತ್ತವೆ. ಇದರಿಂದಾಗಿ ಈ ಸಂದರ್ಭದಲ್ಲಿ ಮಾನವ-ಹಾವುಗಳ ಸಂಘರ್ಷ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಳಿಂಗ ಫೌಂಡೇಶನ್‌ಗೆ ಹೆಚ್ಚಿನ ಕರೆಗಳು ಬರುತ್ತವೆ ಎಂದು ಡಾ. ಶಂಕರ್ ಹೇಳಿದ್ದಾರೆ.
ಆಗುಂಬೆಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ನಾಡ್ಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಎಂಬವರಿಂದ ಕರೆ ಬಂದಿತ್ತು. ಈ ವೇಳೆ ಪ್ರಶಾಂತ್ ಅವರೊಂದಿಗೆ ಸ್ಥಳಕ್ಕೆ ತೆರಳಿದಾಗ ಹಾವನ್ನು ಕಂಡು ಬೆರಗಾಗಿದೆ.
ಈ ಹಾವುಗಳ ಸರಾಸರಿ ತೂಕವು ಸಾಮಾನ್ಯವಾಗಿ 3.5 ರಿಂದ 7 ಕಿಲೋಗ್ರಾಂಗಳವರೆಗೆ ಇರುತ್ತದೆ, ಹೆಣ್ಣು 2 ರಿಂದ 3.5 ಕಿಲೋಗ್ರಾಂಗಳಷ್ಟು ಮತ್ತು ಗಂಡು 3.5 ರಿಂದ 6 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಆದರೆ, ಪ್ರಸ್ತುತ ರಕ್ಷಣೆ ಮಾಡಿದ ಹಾವು 12.5 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿದೆ. ಇಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ. ಈ ಹಾವುಗಳ ಪತ್ತೆ ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಶಂಕರ್ ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu