ಕನ್ಯಾಕುಮಾರಿಯಲ್ಲಿ ದೇಶದ ಮೊತ್ತಮೊದಲ ಗಾಜಿನ ಸೇತುವೆ ಲೋಕಾರ್ಪಣೆ: ಪ್ರವಾಸಿಗರಿಗೆ ಮುಕ್ತ


ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಿರ್ಮಾಣ ಗೊಂಡಿರುವ ದೇಶದ ಮೊತ್ತಮೊದಲ ಗಾಜಿನ ಸೇತುವೆ ಲೋಕಾರ್ಪಣೆಗೊಂಡಿದೆ. ವಿವೇಕಾನಂದ ರಾಕ್‌ ಸ್ಮಾರಕ ಹಾಗೂ ತಿರುವಳ್ಳುವರ್‌ ಪ್ರತಿಮೆಯನ್ನು ಸಂಪರ್ಕಿಸುವ 77 ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಉದ್ಘಾಟಿಸಿದರು.

37 ಕೋಟಿ ರೂ. ವೆಚ್ಚದಲ್ಲಿ ಈ ಗಾಜಿನ ಸೇತುವೆ ನಿರ್ಮಾಣಗೊಂಡಿದ್ದು, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ತಿರುವಳ್ಳುವರ್‌ ಪ್ರತಿಮೆ ಅನಾವರಣದ ಬೆಳ್ಳಿ ಮಹೋತ್ಸವಕ್ಕೆ ಈ ಸೇತುವೆ ಉದ್ಘಾಟನೆಯಾಗಿದೆ. 


ಈ ಸೇತುವೆ 77 ಮೀ ಉದ್ದ ಮತ್ತು 10 ಮೀ. ಅಗಲವನ್ನು ಹೊಂದಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕವನ್ನು ಸಂಪರ್ಕ ಸಾಧಿಸಲಿದೆ. ಅಲ್ಲದೆ ಇದು ದೇಶದ ಮೊದಲ ಗಾಜಿನ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆಗೆ ಈ ಎರಡು ಸ್ಮಾರಕಗಳಿಗೆ ಭೇಟಿ ನೀಡಲು ಸಮುದ್ರದ ಮೂಲಕವೇ ತೆರಳಬೇಕಿತ್ತು. ಆದರೆ ಗಾಜಿನ ಸೇತುವೆ ಪ್ರವಾಸಿಗರಿಗೆ ಎರಡೂ ಸ್ಮಾರಕ ತಲುಪಲು ಸುಲಭ ಮಾರ್ಗವನ್ನು ಕಲ್ಪಿಸಿದೆ. ಜೊತೆಗೆ ಪ್ರವಾಸದ ಹೊಸ ಅನುಭೂತಿ ನೀಡಲಿದೆ.


BREAKING NEWS
Loading latest news...
Join our WhatsApp Channel Powered By : Online Pudu