ಬಂಟ್ವಾಳ: ಹಿಂದೂ ಯುವಸೇನೆಯ ಮುಖಂಡನಿಗೆ ಚೂರಿ ಇರಿತ


ಬಂಟ್ವಾಳ: ಹಿಂದೂ ಯುವಸೇನೆಯ ಮುಖಂಡನಿಗೆ ಚೂರಿಯಿಂದ ಇರಿದಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ರವಿವಾರ ನಡೆದಿದೆ.

ಹಿಂದೂ ಯುವಸೇನೆಯ ಮುಖಂಡ, ಉದ್ಯಮಿ ಪುಷ್ಪರಾಜ್ ಎಂಬವರು ಚೂರಿ ಇರಿತಕ್ಕೊಳಗಾದವರು.  ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಷ್ಪರಾಜ್ ಅವರು ತಮ್ಮ ಸ್ನೇಹಿತ ರವಿ ಎಂಬಾತನಿಂದಲೇ ಚೂರಿಯಿಂದ ಇರಿತಕ್ಕೊಳಗಾಗಿದ್ದಾರೆ. ಪುಷ್ಪರಾಜ್ ತಮ್ಮ ಸ್ನೇಹಿತ ರವಿಯೊಂದಿಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಆತ ಚೂರಿಯಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದ್ದು, ಚೂರಿ ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.





BREAKING NEWS
Loading latest news...
Join our WhatsApp Channel Powered By : Online Pudu