-->
1000938341
ಪುತ್ತೂರು: ಜೀಪ್ ಡಿಕ್ಕಿಯಾಗಿ ತಂದೆ ಮೃತ್ಯು, ಮಕ್ಕಳಿಬ್ಬರು ಗಂಭೀರ ಗಾಯ

ಪುತ್ತೂರು: ಜೀಪ್ ಡಿಕ್ಕಿಯಾಗಿ ತಂದೆ ಮೃತ್ಯು, ಮಕ್ಕಳಿಬ್ಬರು ಗಂಭೀರ ಗಾಯ


ಪುತ್ತೂರು: ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಜೀಪೊಂದು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ.

ಬಡಕ್ಕೋಡಿ ಕಡ್ಯ ನಿವಾಸಿ, ಲಾರಿ ಚಾಲಕ ಲೋಕೇಶ್ ಗೌಡ(48) ಮೃತಪಟ್ಟವರು. ಅವರ ಮಕ್ಕಳಿಬ್ಬರಾದ ದೀಪ್ತಿ (8) ಮತ್ತು ಗಗನ್ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳಿಬ್ಬರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೋಕೇಶ್ ತನ್ನ ಇಬ್ಬರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೋತ್ಸವಕ್ಕೆ ತೆರಳಿ ಮರಳುತ್ತಿದ್ದರು‌. ಈ ವೇಳೆ ಸವಣೂರು ಕಡೆಯಿಂದ ಬರುತ್ತಿದ್ದ ಜೀಪು ಬೈಕ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕನ್ನು ಜೀಪು 50 ಮೀಟರ್ ದೂರದ ತನಕ ಎಳೆದೊಯ್ದಿದ್ದಲ್ಲದೆ, ಬೈಕ್ ಎರಡು ತುಂಡಾಗಿದೆ. ಪರಿಣಾಮ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಲೋಕೇಶ್ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ನಡೆದರೂ ಜೀಪು ಚಾಲಕ ನಿಲ್ಲಿಸದೆ ಬೈಕ್ ಅನ್ನು ಮುಂದಕ್ಕೆ ಎಳೆದೊಯ್ದಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Ads on article

Advertise in articles 1

advertising articles 2

Advertise under the article