ಪರಮಾತ್ಮ ಕೃಷ್ಣನನ್ನು ಮದುವೆ ಆದ ಗ್ವಾಲಿಯರ್ 23 ವರ್ಷದ ಯುವತಿ


ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ  ಕೃಷ್ಣನ ಮೂರ್ತಿಯನ್ನೇ ವಿವಾಹವಾದ ಯುವತಿಹೀಗೆ ಶ್ರೀಕೃಷ್ಣನನ್ನು ಮದುವೆಯಾಗಿ  ಆಧುನಿಕ ಮೀರಾ ಎನಿಸಿಕೊಂಡಿದ್ದಾಳೆ. ಈಕೆಗೆ ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾಳೆ.

ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದ ಗ್ವಾಲಿಯರ್ ನಗರದ ನ್ಯೂ ಬ್ರಜ್‌ ವಿಹಾರ್ ಕಾಲೋನಿಯ ಶಿವಾನಿ ಪರಿಹಾರ್ ಶ್ರೀಕೃಷ್ಣನ ವಿಗ್ರಹವನ್ನು ಮದುವೆಯಾದ ಯುವತಿ. ಈಕೆ ಬಿಕಾಂ ಪದವೀಧರೆ. ತಂದೆ ರಾಮ್ ಪ್ರತಾಪ್ ಪರಿಹಾರ್ ಮತ್ತು ತಾಯಿ ಮೀರಾಪರಿಹಾರ್ ಈ ಮದುವೆಯನ್ನು ಪ್ರಾರಂಭದಲ್ಲಿ ವಿರೋಧಿಸಿದ್ದರು. ಆದರೆ ಮಗಳ ಹಠದಿಂದಾಗಿ ಅವರೂ ಕೊನೆಗೆ ಒಪ್ಪಬೇಕಾಯಿತು. ಎಪ್ರಿಲ್ 18ರಂದು ಶಿವಾನಿಯ ವಿವಾಹ ಕೃಷ್ಣನೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿಯಾಗಿ ನೆರವೇರಿದೆ.ಶ್ರೀಕ್ರಷ್ಣನ ಸುಂದರ ವಿಗ್ರಹ ಜತೆಗೆ ಮಂತ್ರಘೋಷದೊಂದಿಗೆ ಎಲ್ಲ ಸಾಂಪ್ರದಾಯಿಕ ಮದುವೆ ರೀತಿಯಲ್ಲಿ ಈ ಮದುವೆ ನೆರವೇರಿದೆ. ಏಪ್ರಿಲ್ 15ರಂದು ಶಿವಾನಿ ಮದುವೆ ಸಂಭ್ರಮ ಶುರುವಾಗಿತ್ತು. ಮೊದಲ ದಿನ 16 ರಂದು ಮಂಟಪಕ್ಕೆ ಹಳದಿ ಹೂ ಹಾಕುವ ಕಾರ್ಯಕ್ರಮ, ಏಪ್ರಿಲ್ 17ರಂದು ಮದುವೆ ಮೆರವಣಿಗೆ ಮತ್ತು ಏಪ್ರಿಲ್ 18ರಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಯಿತು. ಇಂತಹ ಅಪರೂಪದ ವಿವಾಹ ಸಮಾರಂಭವನ್ನು ಕಣ್ಣುಂಬಿಕೊಳ್ಳಲು ನೂರಾರು ಮಂದಿ ಸೇರಿದ್ದರು.

BREAKING NEWS
Loading latest news...
Join our WhatsApp Channel Powered By : Online Pudu