-->

ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಯಾಕೆ ಇರುತ್ತದೆ ಗೊತ್ತಾ?

ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಯಾಕೆ ಇರುತ್ತದೆ ಗೊತ್ತಾ?

ಕೆಂಪು ಪಟ್ಟಿಯ ಬಗ್ಗೆ ವಿವರ ನೀಡಿದ ಸಚಿವಾಲಯ 

ಯಾವುದೇ ಮಾತ್ರೆ ಸೇವಿಸುವ ಮೊದಲೂ 
 ಪ್ಯಾಕೆಟನ್ನು ಸೂಕ್ಷ್ಮವಾಗಿ ಗಮನಿಸಿ  ಅದರಲ್ಲಿ ಹಲವಷ್ಟು ವಿಷಯಗಳು ಸಾಂಕೇತಿಕವಾಗಿ  ಇರುತ್ತದೆ  ಅದರಲ್ಲಿ ಕೆಂಪು ಪಟ್ಟಿಯು ಸಹ ಒಂದು 
ಕೆಂಪು ಪಟ್ಟಿ ಯಾಕೆ ಇರುತ್ತದೆ 
ಕೆಲ ಮಾತ್ರೆಗಳ ಪ್ಯಾಕೆಟ್ ಮೇಲೆ ಕೆಂಪು ಪಟ್ಟಿ ಇರುವುದನ್ನು ನೀವು ನೋಡಿರಬಹುದು. 

ಇದನ್ನು ಏಕೆ ಹಾಕಲಾಗುತ್ತದೆ ಎಂಬುದನ್ನು ಆರೋಗ್ಯ ಸಚಿವಾಲಯ ವಿವರಿಸಿದೆ. ಸಮಾಲೋಚನೆಯಿಲ್ಲದೆ ಔಷಧಿಯನ್ನು ಸೇವಿಸುವ ಮತ್ತು ಕೆಲವೊಮ್ಮೆ ಅಡ್ಡ ಪರಿಣಾಮಗಳಿಂದ ಬಳಲುವವರನ್ನು ನಾವು ನೋಡಿದ್ದೇವೆ. 


ಕೆಂಪು ಪಟ್ಟಿಯ ಸೂಚನೆ:
ಆರೋಗ್ಯ ಸಚಿವಾಲಯವು ತನ್ನ ಎಕ್ಸ್ ಖಾತೆಯಲ್ಲಿ ಔಷಧಿಯ ಹಿಂದಿನ ಲೇಬಲ್‌ನಲ್ಲಿನ ನಿರ್ದಿಷ್ಟ ವಿವರಕ್ಕೆ ಗಮನ ಕೊಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ. ಇದು ನಿಮ್ಮ ಔಷಧಿ ಎಷ್ಟು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರುವ ವಿವರವಾಗಿದೆ. ಔಷಧಿಗಳ ಪಟ್ಟಿಯ ಮೇಲಿನ ಕೆಂಪು ರೇಖೆಯು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಯನ್ನು ಸೇವಿಸಬಾರದು ಎಂದು ಸೂಚಿಸುತ್ತದೆ' ಎಂದು ಆರೋಗ್ಯ ಸಚಿವಾಲಯವು X ಖಾತೆಯಲ್ಲಿ ಬರೆದಿದೆ.


ಮಾನ್ಯವಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಒದಗಿಸಿದಾಗ ಮಾತ್ರ ಈ ಔಷಧಿಗಳನ್ನು ಔಷಧಾಲಯಗಳಿಂದ ಪಡೆಯಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ. ಅದರಲ್ಲೂ ಆ್ಯಂಟಿ ಬಯೋಟಿಕ್ ವಿಚಾರದಲ್ಲಿ ಹಗುರವಾಗಿ ಕಾಣುವುದು ತರವಲ್ಲ. ಆದ್ದರಿಂದ, ನೀವು ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಾಗ, ಪ್ಯಾಕೆಟ್ ಮೇಲೆ ಕೆಂಪು ಪಟ್ಟಿಯನ್ನು ಕೂಡಾ ಗಮನಿಸುವುದು ಮುಖ್ಯ.
ಮಾತ್ರೆಗಳನ್ನು  ಸರಿಯಾಗಿ ಗಮನಿಸಿ ತೆಗೆದು ಕೊಳ್ಳುವುದು ಉತ್ತಮ

Ads on article

Advertise in articles 1

advertising articles 2

Advertise under the article