ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖ್ಯಾತ ನಟ ಗಂಭೀರ ಗಾಯ


ನವದೆಹಲಿ: ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೆಲುಗು ಸಿನಿಮಾ ಖ್ಯಾತ ನಟ ನವೀನ್ ಪೋಲಿಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಅಮೆರಿಕಾದ ಡೆಲ್ಲಾಸ್‌ನಲ್ಲಿ ಈ ಅಪಘಾತ ನಡೆದಿದ್ದು, ನಟನ ವೀನ್ ಪೋಲಿಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕೈಮೂಳೆ ಮಾತ್ರಲ್ಲದೆ ದೇಹದ ಇತರೆಡೆಗೂ ಗಂಭೀರ ಗಾಯಗಳಾಗಿವೆ ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎನ್ನಲಾಗುತ್ತಿದೆ.

ಅಮೆರಿಕಾದ ಡಲ್ಲಾಸ್‌ನಲ್ಲಿ ಬೈಕ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ನಟನ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಸದ್ಯ ನವೀನ್ ಪೋಲಿಶೆಟ್ಟಿ ಅನಗನಗಾ ಒಕ ರಾಜು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇವರು ಸ್ವತಃ ಚಿತ್ರಕತೆ ಬರಹಗಾರ ಆಗಿದ್ದು, ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಅನುಷ್ಕಾ ಶೆಟ್ಟಿಗೆ ನಾಯಕನಾಗಿ ನಟಿಸಿದ್ದ ಮಿಸ್ ಶೆಟ್ಟಿ ಮಿಸ್ಟ‌ರ್ ಪೋಲಿಶೆಟ್ಟಿ ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು.