ಅಶ್ಲೀಲ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಓಟಿಟಿ, ವೆಬ್ ಸೈಟ್, ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ
Friday, March 15, 2024
ನವದೆಹಲಿ: ಅಶ್ಲೀಲ ವೀಡಿಯೋ ಕಂಟೆಂಟ್ ಹಾಗೂ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಓಟಿಟಿ ಫ್ಲಾಟ್ ಫಾರ್ಮ್, ವೆಬ್ ಸೈಟ್ ಹಾಗೂ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ.
ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಿದ ಬಳಿಕ ಕೇಂದ್ರ ಸರ್ಕಾರವು ಈ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಅವುಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಿಷೇಧಿಸಿದೆ. ಬ್ಯಾನ್ ಆದ ಈ ಕೆಲ ಓಟಿಟಿ ಹಾಗೂ ಆ್ಯಪ್ ಗಳಲ್ಲಿ ಆಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದವು.
ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್ ಗಳನ್ನು ಹೊಂದಿದ್ದ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ,19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು, OTT ಪ್ಲಾಟ್‌ಫಾರ್ಮ್‌ಗಳ 57 ಸಾಮಾಜಿಕ ಮಾಧ್ಯಮದ ಖಾತೆಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ನಿಷೇಧಿತ 10 ಅಪ್ಲಿಕೇಶನ್‌ಗಳಲ್ಲಿ ಏಳು ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಮೂರು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿತ್ತು.