ಕರೆ ಮಾಡುವವರಿಗೆ ಹೆಸರು ಪ್ರದರ್ಶಿತವಾಗಲು ನೆಟ್ ವರ್ಕ್ ಪೂರೈಕೆದಾರರಿಗೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಸಲಹೆ

ಹೊಸದಿಲ್ಲಿ: ಕರೆ ಸ್ವೀಕರಿಸುವವರಿಗೆ ತಮ್ಮ ಹೆಸರು ಪ್ರದರ್ಶನವಾಗಬೇಕೆಂದು ಸಾಮಾನ್ಯ ಕರೆ ಮಾಡುವವರಿಗೆ ಅನುಮತಿಸಬೇಕೆಂದು ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ನೆಟ್ ವರ್ಕ್ ಪೂರೈಕೆದಾರರಿಗೆ ಶಿಫಾರಸು ಮಾಡಿದೆ. ಈ ಸೇವೆಯನ್ನು ಐಚ್ಛಿಕ ಹೆಚ್ಚುವರಿ ಸೇವೆಯಾಗಿ ಜಾರಿಗೊಳಿಸಬೇಕೆಂಬ ಸಲಹೆಯನ್ನೂ ಪ್ರಾಧಿಕಾರ ನೀಡಿದೆ ಎಂದು

ಈ ಫೀಚರ್ ಅನ್ನು ಕಾಲಿಂಗ್ ನೇಮ್ ಪ್ರೆಸೆಂಟೇಶನ್‌ (ಸಿಎನ್‌ಪಿ) ಎಂದು ಕರೆಯಲಾಗುತ್ತದೆ. ಈ ಫೀಚ‌ರ್ ಅನ್ನು ಪೂರಕ ಸೇವೆ ಎಂದು ಭಾರತೀಯ ಟೆಲಿಕಮ್ಯುನಿಕೇಶನ್ ನೆಟ್‌ವರ್ಕ್ ಜಾಲದಾದ್ಯಂತ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಸಾಧನಗಳಲ್ಲಿ ಅನುಮತಿಸಬೇಕು ಎಂದು ಟ್ರಾಯ್‌ ಶಿಫಾರಸು ಮಾಡಿದೆ.

ಪ್ರತಿ ನೆಟ್‌ವರ್ಕ್ ಪೂರೈಕೆದಾರರು ಮೊದಲು ಪ್ರಯೋಗಾರ್ಥವಾಗಿ ಈ ಸೇವೆಯನ್ನು ಪ್ರತಿ ಲೈಸನ್ಸ್‌ ಸರ್ವಿಸ್ ಏರಿಯಾದಲ್ಲಿ ಒದಗಿಸಬೇಕು ಎಂದು ಟ್ರಾಯ್ ಹೇಳಿದೆ. ಮೊಬೈಲ್ ಸಾಧನದಲ್ಲಿ ಪ್ರದರ್ಶಿತವಾಗುವ ಹೆಸರು ಕರೆ ಮಾಡುವವರು ತಮ್ಮ ಸಂಖ್ಯೆ ನೋಂದಣಿ ಮಾಡುವಾಗ ನೀಡಿದ ಹೆಸರಾಗಿರಬೇಕು.

ವ್ಯವಹಾರ ಸಂಪರ್ಕಗಳಾಗಿದ್ದಲ್ಲಿ ಅವುಗಳ ಆದ್ಯತೆಯ ಹೆಸರು, ಅಂದರೆ ಟ್ರೇಡ್‌ಮಾರ್ಕ್ ಹೆಸರಿನಂತಹ ಸರ್ಕಾರದೊಂದಿಗೆ ನೋಂದಾಯಿತವಾದ ಹೆಸರಾಗಿರಬೇಕು. ಆದರೆ ಟ್ರಾಯ್‌ನ ಈ ಕ್ರಮವು ಸ್ಪಾಮ್ ಮತ್ತು ಸ್ಕ್ಯಾಮ್ ಕರೆದಾರರನ್ನು ಪತ್ತೆಹಚ್ಚಲು ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಕಾನೂನು ಜಾರಿ ಏಜನ್ಸಿಗಳ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಟೂಕಾಲ‌ರ್ ಬಾಧಿತವಾಗಬಹುದೆಂದು ಅಂದಾಜಿಸಲಾಗಿದೆ. ಆದರೆ ಟ್ರಾಯ್ ಕ್ರಮವನ್ನು ಶ್ಲಾಘಿಸಿದ ಟೂಕಾಲರ್ ವಕ್ತಾರರು, "ಟೂಕಾಲರ್ ಒದಗಿಸುವ ಸಂಪೂರ್ಣ ಶ್ರೇಣಿಯ ಸೇವೆಗಳು ಮತ್ತು ಕಾರ್ಯಾತ್ಮಕತೆಗೆ ಹೋಲಿಸಿದಾಗ ಅದು ಸ್ಪರ್ಧೆ ನೀಡುವುದೆಂದು ಹೇಳಲಾಗದು,” ಎಂದು ಹೇಳಿದ್ದಾರೆ.