ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇಲ್ಲ- CM ಸಿದ್ದರಾಮಯ್ಯ



ಮೋದಿ ಯಾಕೆ ಇಷ್ಟು ಸುಳ್ಳು  ಹೇಳ್ತೀರಿ. ಅವರು ಗ್ಯಾರಂಟಿ ಪದವನ್ನು ಕದ್ದು ಬಿಟ್ಟಿದ್ದಾರೆ. ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ಗೆ ಗ್ಯಾರಂಟಿ ಜಾರಿ ಮಾಡಲು ಆಗುವುದಿಲ್ಲ. ಮೋದಿ ಕೊಟ್ಟ ಮಾತು ಯಾವುದನ್ನು ಈಡೇರಿಸಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಮಂತ್ರಿಯನ್ನು  ನೋಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿಯನ್ನು ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆದಿಲ್ಲ. ಮೋದಿ ನೀಡಿದ ಭರವಸೆಯನ್ನು ವಿಮರ್ಶೆ ಮಾಡಬೇಕು. 2014 ರಲ್ಲಿ ನೀಡಿದ ಯಾವುದಾದರೂ ಪ್ರಮುಖ ಭರವಸೆ ಈಡೇರಿಸಿದ್ದಾರ? ಅಚ್ಚೆ ದಿನ್ ಆಯೆಂಗ ಎಂದು ಪೆಟ್ರೋಲ್,ಡೀಸೆಲ್, ಗ್ಯಾಸ್, ಗೊಬ್ಬರ, ಅಹಾರ ಪದಾರ್ಥ ಬೆಲೆ ಹೆಚ್ಚಿಸಿದರು. ಇದನ್ನು ಯೋಚನೆ ಮಾಡಬೇಕು ಎಂದರು‌.


ಲೋಕಸಭಾ ಚುನಾವಣೆಯಲ್ಲಿ  ರಾಜ್ಯದಲ್ಲಿ 28 ರಲ್ಲಿ 20 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ 28 ಸ್ಥಾನದಲ್ಲಿ ಗೆಲ್ಲುತ್ತದೆ ಎಂದು ಹೇಳುವುದು‌ ಜನರ ದಾರಿ ತಪ್ಪಿಸುವ ತಂತ್ರ ಎಂದರು.


.

BREAKING NEWS
Loading latest news...
Join our WhatsApp Channel Powered By : Online Pudu