ಸರಕಾರಿ ನೌಕರರಿಗೆ ಗಳಿಕೆ ರಜೆ ನಗದೀಕರಣ
Friday, December 22, 2023
ಬೆಂಗಳೂರು: ಎಲ್ಲ ವೃಂದದ ರಾಜ್ಯ ಸರಕಾರಿ ಅಧಿಕಾರಿ ಮತ್ತು ನೌಕರರಿಗೆ, 2024ನೇ ಸಾಲಿಗೆ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯ ಕಲ್ಪಿಸಿ ಸರಕಾರ ಆದೇಶಿಸಿದೆ.
2024ರ ಜ.1 ರಿಂದ ಡಿ 31ರ ವರೆಗಿನ ಅವಧಿಯಲ್ಲಿ ಎಲ್ಲ ವೃಂದದ ರಾಜ್ಯಸರಕಾರಿ ಅಧಿಕಾರಿ ಮತ್ತು ನೌಕರರು ಹಾಗೂ ಸರಕಾರದಿಂದ ಸಹಾಯಾನು ದಾನ/ ಅನುದಾನ ಪಡೆಯುವ ಅಥವಾ ಪಡೆಯದಿರುವ ಸರಕಾರದ ಎಲ್ಲ ಸಂಸ್ಥೆಗಳ/ ಉದ್ಯಮಗಳ ನೌಕರರಿಗೂ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಹಿಂತಿರುಗಿಸಿ ಪ್ರತಿಯಾಗಿ ರಜೆ ವೇತನಕ್ಕೆ ಸರಿಸಮಾನವಾದ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಸೌಲಭ್ಯಕ್ಕಾಗಿ ಒಂದು ತಿಂಗಳು ಮುಂಚಿತವಾಗಿ ಮನವಿ ನೀಡಬೇಕು.