-->
ನಿಮ್ಮ PASSWORD ಕೂಡ ಹೀಗೆ ಇದೆಯ?

ನಿಮ್ಮ PASSWORD ಕೂಡ ಹೀಗೆ ಇದೆಯ?


ನವದೆಹಲಿ: ವೈಯಕ್ತಿಕ ದಾಖಲೆಯ ಗೌಪ್ಯತೆ ಕುರಿತು ಕಾಳಜಿ ಹೆಚ್ಚಾಗುತ್ತಿರುವ ನಡುವೆಯೇ ಈಗಲೂ ಹೆಚ್ಚಿನ ಜನರು ಸುಲಭದ ಪಾಸ್‌ವರ್ಡ್‌ ಬಳಸುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.

ನಾರ್ಡ್‌ಪಾಸ್‌ ಅಧ್ಯಯನದ 5ನೇ ಆವೃತ್ತಿಯ ವರದಿ ಪ್ರಕಾರ, 2023ರಲ್ಲಿ ಭಾರತದಲ್ಲಿ ಅಧಿಕ ಸಂಖ್ಯೆಯ ಜನರ ಪಾಸ್‌ವರ್ಡ್‌ “123456′ ಆಗಿದೆ ಎಂದು ತಿಳಿಸಿದೆ.

ಇದೇ ವೇಳೆ ಜಗತ್ತಿನ ಶೇ.31ರಷ್ಟು ಪಾಸ್‌ವರ್ಡ್‌ಗಳು ಕೇವಲ ಸಂಖ್ಯೆಗಳನ್ನು ಹೊಂದಿದೆ. “123456789′, “12345′ ಮತ್ತು “00000′ ಆಗಿದೆ ಎಂದು ಅದು ಹೇಳಿದೆ.

ಹೆಚ್ಚಿನ ಇಂಟರ್ನೆಟ್‌ ಬಳಕೆದಾರರು ದೇಶದ ಅಥವಾ ನಗರದ ಹೆಸರನ್ನು ಪಾಸ್‌ವರ್ಡ್‌ ಆಗಿ ಬಳಸುತ್ತಾರೆ. ಭಾರತೀಯರು ಕೂಡ ಇದಕ್ಕೆ ಹೊರತಲ್ಲ. ಭಾರತದಲ್ಲಿ “ಇಂಡಿಯಾ123′ ಎಂದು, ಸ್ಪೇನ್‌ನಲ್ಲಿ “ಬಾರ್ಸಿಲೊನಾ’ ಮತ್ತು ಗ್ರೀಸ್‌ನಲ್ಲಿ “ಕಲಾಮತ’ ಎಂದು ಹೆಚ್ಚಿನ ಜನರು ಬಳಸುತ್ತಾರೆ.

ಭಾರತದಲ್ಲಿ ಅನೇಕ ಜನರು “ಪಾಸ್‌ವರ್ಡ್‌’, “ಪಾಸ್‌ವರ್ಡ್‌123′, “ಪಾಸ್‌123′ ಮತ್ತು “ಅಡ್ಮಿನ್‌’ ಎಂದು ಬಳಸುವುದು ಸಾಮಾನ್ಯವಾಗಿದೆಯಂತೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article