-->
1000938341
ಮಂಗಳೂರು: ಜಿಹಾದಿಗಳೇ ಇದು ಔರಂಗಜೇಬನ ಕಾಲವಲ್ಲ‌ ನರೇಂದ್ರನ ಕಾಲ - ಶರಣ್ ಪಂಪ್ ವೆಲ್

ಮಂಗಳೂರು: ಜಿಹಾದಿಗಳೇ ಇದು ಔರಂಗಜೇಬನ ಕಾಲವಲ್ಲ‌ ನರೇಂದ್ರನ ಕಾಲ - ಶರಣ್ ಪಂಪ್ ವೆಲ್

ಮಂಗಳೂರು: ಮಹಮ್ಮದ್ ಪೈಗಂಬರ್, ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲು ನಾಚಿಕೆಯಾಗಬೇಕು. ಜಿಹಾದಿಗಳೇ ಇದು ಔರಂಗಜೇಬನ ಕಾಲವಲ್ಲ‌, ನರೇಂದ್ರನ ಕಾಲ ಎಂದು ವಿಎಚ್ ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಕಿಡಿಕಾರಿದರು.

ವಿಎಚ್ ಪಿಯ ಷಷ್ಠಿಪೂರ್ತಿ ವರ್ಷದನ್ವಯ ಮಂಗಳೂರಿಗೆ ಆಗಮಿಸಿರುವ ಶೌರ್ಯ ಜಾಗರಣ ರಥಯಾತ್ರೆಯ ಹಿನ್ನೆಲೆಯಲ್ಲಿ ನಗರದ ಕದ್ರಿ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಇದೇ ಘಟನೆ ಮಂಗಳೂರಿನಲ್ಲಿ ‌ನಡೆದರೆ ನೂರಾರು ಇಸ್ಲಾಂ ದಂಗೆಕೋರರ ಮನೆಗಳು ಹುಡಿಯಾಗುತ್ತಿತ್ತು ಎಂದರು.

ನಮ್ಮ ಬಜರಂಗದಳದ ಕಾರ್ಯಕರ್ತರ ಬಗ್ಗೆ ನಮಗೆ ಹೆಮ್ಮೆಯಿದೆ. ಪ್ರಶಾಂತ್ ಪೂಜಾರಿ ಹತ್ಯೆ ಮಾಡಿರುವ ಪ್ರತೀಕಾರವಾಗಿ ಜೈಲಿನಲ್ಲಿಯೇ ಯಾರೋ ಒಬ್ಬ ಯುವಕನೇ ಚಮಚವನ್ನೇ ಚೂಪು ಮಾಡಿ ಹಂತಕನಿಗೆ ಇರಿದು ಬುದ್ಧಿ ಕಲಿಸಿದ್ದ. ಪ್ರವೀಣ್ ನೆಟ್ಟಾರು ಹತ್ಯೆಯ ವಿಚಾರದಲ್ಲಿ ನಾನು ಮಾತನಾಡಲ್ಲ. ಹಾಗೆ ಮಾತನಾಡಿದ್ದಾಗ ಕೇಸ್ ಬಿದ್ದಿದೆ. ಆದರೆ ನಾವು ಯಾವತ್ತಿಗೂ ಹಿಂದೂ ಕಾರ್ಯಕರ್ತರ ಯಾವ ಬಲಿದಾನವನ್ನು ವ್ಯರ್ಥ ಮಾಡೋಲ್ಲ. ಮುಸ್ಲಿಮರೇ ನೀವು ಕೃಷ್ಣನ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಸ್ಲಿಂ ಧರ್ಮ ಸಂಪೂರ್ಣ ನಾಶವಾಗುವುದು ಕಟ್ಟಿಟ್ಟ ಬುತ್ತಿ. ಆದ್ದರಿಂದ ಪ್ರತೀ ಮನೆಯನ್ನು ಹಿಂದೂ ಮನೆಯಾಗಿಸಲು, ವಿಚ್ ಎಚ್ ಪಿ ಮನೆಯಾಗಿಸಲು ನಾವು ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದೆ ಎಂದು ಶರಣ್ ಪಂಪ್ ವೆಲ್ ಹೇಳಿದರು.

Ads on article

Advertise in articles 1

advertising articles 2

Advertise under the article