-->
ಪುತ್ರನನ್ನೇ ಕೊಂದು ನೀರಿನಲ್ಲಿ ಕುದಿಸಿ ತಲೆಯ ಮಾಂಸ ತಿಂದ ತಾಯಿ

ಪುತ್ರನನ್ನೇ ಕೊಂದು ನೀರಿನಲ್ಲಿ ಕುದಿಸಿ ತಲೆಯ ಮಾಂಸ ತಿಂದ ತಾಯಿ


ಈಜಿಪ್ಟ್: ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿದೆ. ಹೌದು, ದೇವರಿಗಿಂಲೂ ತಾಯಿಯೇ ಮಿಗಿಲು. ಆದರೆ ಇಲ್ಲೊಬ್ಬ ತಾಯಿಯೇ ತಾನು ಹೆತ್ತಮಗುನ್ನು ಕೊಂದು ಅಡುಗೆ ಮಾಡಿ ತಿಂದಿದ್ದಾಳೆ. ಈ ಭಯಾನಕ  ಘಟನೆ ಈಜಿಪ್ಟ್‌ನಲ್ಲಿ ಬೆಳಕಿಗೆ ಬಂದಿದೆ.

ಹನಾ ಮೊಹಮ್ಮದ್ ಹಸನ್ ಕೃತ್ಯ ಎಸಗಿದ ಮಹಿಳೆ. ಮೃತ 5 ವರ್ಷದ ಪುತ್ರ ಯೂಸುಫ್ ನನ್ನು ಕೊಂದು ಆಕೆಯ ತಲೆಯನ್ನು ತಿಂದಿರುವ ಆರೋಪ ಈ ಮಹಿಳೆಯ ಮೇಲಿದೆ.

ಹನಾ ಮೊಹಮ್ಮದ್ ಹಸನ್ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು.ಆಕೆ ತನ್ನ 5 ವರ್ಷದ ಪುತ್ರ ಯೂಸುಫ್‌ನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ತನ್ನ ಪುತ್ರ ಯೂಸುಫ್ ನನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಬಳಿಕ ತಲೆಯನ್ನು ಬೇರ್ಪಡಿಸಿ ಬಿಸಿನೀರಿನಲ್ಲಿ ಕುದಿಸಿ ತುಂಡು ಮಾಡಿ ತಿಂದಿದ್ದಾಳೆ ಎಂದು ತಿಳಿದು ಬಂದಿದೆ.

ಮಗನನ್ನು ಕೊಂದ ಬಳಿಕ ಆಕೆ ಮೃತದೇಹವವನ್ನು ನೀರಿಗೆ ಹಾಕಿದ್ದಾಳೆ. ಆದರೆ, ಮನೆಯ ಪಕ್ಕದಲ್ಲಿಯೇ ವಾಸವಿರುವ ಸೋದರ ಸಂಬಂಧಿ ಯೂಸುಫ್ ಕಾಣಲಿಲ್ಲವೆಂದು ಹುಡುಕಾಡಿದಾಗ ಮೃತದೇಹದ ಕೆಲವು ತುಣುಕುಗಳು ಪತ್ತೆಯಾಗಿವೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಹನಾಳನ್ನು ವಿಚಾರಿಸಿದ್ದಾರೆ. ತನಿಖೆಯಲ್ಲಿ ಆಘಾತಕಾರಿ ಮಾಹಿತಿಗಳು ಬಹಿರಂಗಗೊಂಡಿವೆ. ಮಗನ ತಲೆ ಎಲ್ಲಿದೆ ಎಂದು ಕೇಳಿದಾಗ, ಅದು ತಿಂದಿದ್ದೇನೆಂದು ಹೇಳಿದ್ದಾಳೆ.

ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಳು. ಪತಿಯ ಮಾತನ್ನು ಕೇಳದೆ ಹನಾ ಮಗನನ್ನು ಕರೆದುಕೊಂಡು ಬಂದಿದ್ದಳು. ವಿಚ್ಛೇದನವೂ ಆಯಿತು. ಆದರೂ ಪತಿ ರಾಜಿ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಇದೀಗ ಈ ಭಯಾನಕ ಘಟನೆ ಸಂಭವಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article