ಮಂಗಳೂರು: ಇಸ್ರೇಲ್‌ನಲ್ಲಿ ದ.ಕ.ಜಿಲ್ಲೆಯವರಿದ್ದಲ್ಲಿ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿ - ಡಿಸಿ



ಮಂಗಳೂರು: ಪ್ಯಾಲೆಸ್ತೈನ್ ಹಮಾಸ್ ಉಗ್ರರ ದಾಳಿಗೊಳಗಾಗಿರುವ ಯುದ್ಧಪೀಡಿತ ಇಸ್ರೇಲ್ ನಲ್ಲಿ ದ.ಕ.ಜಿಲ್ಲೆಯವರು ಸಿಲುಕಿದ್ದಲ್ಲಿ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಎಂದು ದ.ಕ.ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಇಸ್ರೇಲ್ ದೇಶದ ಪ್ರಸ್ತುತ ಪರಿಸ್ಥಿತಿ ಉಲ್ಬಣಗೊಂಡಿದೆ‌. ಅಲ್ಲಿಗೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಉದ್ದೇಶಗಳಿಗೆ ಹೋಗಿರುವ ಅಥವಾ ವಾಸವಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಅವರ ಬಗ್ಗೆ ಮಾಹಿತಿ ನೀಡಬಹುದು. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ: 1077/ 0824-2442590 ಗೆ ಕರೆ ಮಾಡಿ ಕೂಡಲೇ ನೀಡುವಂತೆ ಕೋರಲಾಗಿದೆ ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ 080-22340676, 080-22253707 ಮಾಹಿತಿ ನೀಡುವಂತೆ ದ.ಕ‌.ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu