-->
ಪೊಲೀಸ್ ಠಾಣೆಯಲ್ಲಿಯೇ ಗದ್ದಲ ಎಬ್ಬಿಸಿದ ಆರೋಪ ಜೈಲರ್ ಸಿನಿಮಾ ಪ್ರಮುಖ ನಟ ಅರೆಸ್ಟ್

ಪೊಲೀಸ್ ಠಾಣೆಯಲ್ಲಿಯೇ ಗದ್ದಲ ಎಬ್ಬಿಸಿದ ಆರೋಪ ಜೈಲರ್ ಸಿನಿಮಾ ಪ್ರಮುಖ ನಟ ಅರೆಸ್ಟ್

ಕೊಚ್ಚಿನ್: ಪಾನಮತ್ತನಾಗಿ ಪೊಲೀಸ್ ಠಾಣೆಯಲ್ಲಿಯಢ ದಾಂಧಲೆ ಮಾಡಿದ ಆರೋಪದಲ್ಲಿ 'ಜೈಲರ್' ಸಿನಿಮಾದ ಪ್ರಮುಖ ನಟ ವಿನಾಯಕನ್ ಬಂಧನಕ್ಕೊಳಗಾಗಿದ್ದಾರೆ.

ತಾನಿದ್ದ ಅಪಾರ್ಟ್ ಮೆಂಟ್ ನಲ್ಲಿ ಜಗಳ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ವಿನಾಯಕನ್ ಗೆ ಸಮನ್ಸ್ ನೀಡಿದ್ದರು‌. ಈ ಹಿನ್ನೆಲೆಯಲ್ಲಿ ಎರ್ನಾಕುಲಂ ಉತ್ತರ ಠಾಣೆಗೆ ಅವರು ಹಾಜರಾಗಿದ್ದರು‌‌. ಈ ವೇಳೆ ಠಾಣೆಯಲ್ಲಿಯೂ ಗದ್ದಲ ಎಬ್ಬಿಸಿದರು ಎನ್ನಲಾಗಿದೆ.


ಪೊಲೀಸ್ ಠಾಣೆಯಲ್ಲಿ ತೊಂದರೆ ಉಂಟು ಮಾಡಿದ ಕಾರಣಕ್ಕಾಗಿ ನಟನನ್ನು ಬಂಧಿಸಲಾಗಿದೆ. ಅಗತ್ಯ ವೈದ್ಯಕೀಯ ತಪಾಸಣೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article