ಕುಕ್ಕೆ ದೇವರ ದರ್ಶನ ಮಾಡಿ ಬಸ್ ಹತ್ತಿದಾಗ 25 ಗ್ರಾಂ ನ ಮಾಂಗಲ್ಯ ಸರ ಕಳವು

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ಬಳಿಕ ಊರಿಗೆ ಹೋಗಲು ಬಸ್ ಹತ್ತಿದ ಮಹಿಳೆಯ ಮಾಂಗಲ್ಯ ಸರ ಕಳವು ಆದ ಘಟನೆ ನಡೆದಿದೆ

 ಸೋಮವಾರ ಸಂತೆ, ಕೊಡಗು ನಿವಾಸಿಯಾದ  ಲೀಲಾ (55) ಎಂಬವರು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆಪ್ಟೆಂಬರ್3 ರಂದು ಬೆಳಿಗ್ಗೆ  ಅವರ ಊರಿನ ಇತರರೊಂದಿಗೆ ಕುಕ್ಕೇ ಶ್ರೀ ಸುಬ್ರಮಣ್ಯ  ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು, ಊರಿಗೆ ಹೋಗಲು ಬಸ್ ಹತ್ತಿದಾಗ ಈ ಕಳವು ನಡೆದಿದೆ.  ಮಧ್ಯಾಹ್ನ  ಹಾಸನ ಬೆಂಗಳೂರು ಬಸ್ ಗೆ  ಮಹಿಳೆ  ಹಾಗೂ ಇತರರೊಂದಿಗೆ ಬಸ್ಸಿಗೆ ಹತ್ತುವಾಗ  ತುಂಬಾ ನೂಕು ನುಗ್ಗಲಿದ್ದು,  ಬಸ್ಸು  ಹತ್ತಿ  ಸೀಟಿನಲ್ಲಿ  ಕೂತು ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದೆ. 

ಬಸ್ ನಲ್ಲಿ ನೂಕು ನುಗ್ಗಲಿದ್ದ ಸಮಯ  ಮಹಿಳೆಯ ಕುತ್ತಿಗೆಯಲ್ಲಿದ್ದ ಅಂದಾಜು ರೂ 87000/- ಮೌಲ್ಯದ ಮಾಂಗಲ್ಯ ಸರವನ್ನು ಯಾರೊ ಕಳ್ಳರು ಕಳ್ಳತನ ಮಾಡಿದ್ದಾರೆ. ಮಹಿಳೆ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ  ಅ.ಕ್ರ ನಂಬ್ರ  : 66/2023 ಕಲಂ:379 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.