ಬೇರೊಬ್ಬಾಕೆಯೊಂದಿಗೆ ಫೋನ್ ನಲ್ಲಿ ಮಾತನಾಡುವ ಪತಿ - ನವವಿವಾಹಿತೆ ಆತ್ಮಹತ್ಯೆಗೆ ಶರಣು

ತಿರುವನಂತಪುರಂ: ಪತಿ ಬೇರೊಬ್ಬಾಕೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ ಎಂದು ಶಂಕಿಸಿರುವ  ಯುವತಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ರಾಜಧಾನಿ ತಿರುವನಂತಪುರಂನ ಅರುವಿಕ್ಕರದಲ್ಲಿ ನಡೆದಿದೆ.

ರೇಷ್ಮಾ (23) ಮೃತಪಟ್ಟ ದುರ್ದೈವಿ. 2023ರ ಜೂನ್ 12 ರಂದು ಅಕ್ಷಯ್ ಹಾಗೂ ರೇಷ್ಮಾ ವಿವಾಹವಾಗಿತ್ತು. ಆದರೆ ಪತಿಯ ಮೇಲೆ ಸಂದೇಹದಿಂದ ಯುವತಿ ಪ್ರಾಣ ಬಿಟ್ಟಿದ್ದಾಳೆ.

ರೇಷ್ಮಾ ಪತಿಗೆ ಆರೋಗ್ಯ ಸರಿಯಿಲ್ಲ, ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಆಕೆಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದಾಳೆ ಎಂದು ಶಂಕಿಸಿದ್ದಳು. ಇದರಿಂ ಖಿನ್ನತೆಗೆ ಒಳಗಾಗಿದ್ದ ರೇಷ್ಮಾ ಇಂದು ಬೆಳಗಿನ ಜಾವ 3 ಗಂಟೆಗೆ ತನ್ನ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ವೇಳೆ ಅಕ್ಷಯ್ ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ರೇಷ್ಮಾಳ ಮೃತದೇಹ ನೋಡಿ ಅಕ್ಷಯ್ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರೇಷ್ಮಾ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ರೇಷ್ಮಾ ಸಾವಿನ ತನಿಖೆ ನಡೆಯುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu