4 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1402 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

4 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1402 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ





ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಗಳಲ್ಲಿ ಖಾಲಿ ಇರುವ 1402 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(IBPS) ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.


ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಇಲ್ಲಿದೆ.


ಹುದ್ದೆಯ ಹೆಸರು:

ಐಟಿ ಅಧಿಕಾರಿ - 120 ಹುದ್ದೆಗಳು

ಅಗ್ರಿಕಲ್ಚರಲ್ ಫೀಲ್ಡ್ ಅಧಿಕಾರಿ - 500 ಹುದ್ದೆಗಳು

ರಾಜ್‌ಭಾಷಾ ಅಧಿಕಾರಿ - 41 ಹುದ್ದೆಗಳು

ಕಾನೂನು ಅಧಿಕಾರಿ- 10 ಹುದ್ದೆಗಳು

ಎಚ್.ಆರ್./ಪರ್ಸನಲ್ ಅಧಿಕಾರಿ- 31 ಹುದ್ದೆಗಳು

ಮಾರ್ಕೆಟಿಂಗ್ ಅಧಿಕಾರಿ - 700 ಹುದ್ದೆಗಳು


ಒಟ್ಟು ಖಾಲಿ ಇರುವ ಹುದ್ದೆಗಳು 1402 - ಹುದ್ದೆಗಳು


ಶೈಕ್ಷಣಿಕ ಅರ್ಹತೆ: ಆಯಾ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಇರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಯಾ ಸ್ನಾತಕೋತ್ತರ ಪದವಿ ಹೊಂದಿರಬೇಕು.


ಆಗಸ್ಟ್‌ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 21ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.


ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಬೀದರ್, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ!

www.ibps.in