ಎನ್‌ಡಿಎಗೆ 306 ಸೀಟು, ಇಂಡಿಯಾ 193: ಈಗ ಚುನಾವಣೆ ನಡೆದರೆ ಮೋದಿ ಮತ್ತೆ ಪ್ರಧಾನಿ- ಸಮೀಕ್ಷೆ


ನವದೆಹಲಿ: ದೇಶದಲ್ಲಿ ಈಗ ಲೋಕಸಭೆ ಚುನಾ ವಣೆ ನಡೆದರೆ NDA ಮೈತ್ರಿಕೂಟ ಬಹು ಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು 'ಇಂಡಿಯಾ ಟುಡೇ' ನಡೆಸಿರುವ ಮೂಡ್ ಆಫ್ ದ ನೇಶನ್' ಸಮೀಕ್ಷೆ ಹೇಳಿದೆ. 

ಅಲ್ಲದೇ  BJP ಯೊಂದೇ 287 ಸ್ಥಾನ ಗಳಿಸುವ ಮೂಲಕ ಮ್ಯಾಜಿಕ್ ನಂಬರ್‌ ದಾಟಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಇನ್ನು ಇತ್ತೀಚೆಗೆ ರಚನೆ ಯಾಗಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟ 193 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ


 ಇತರರು 44 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಕಾಂಗ್ರೆಸ್‌ ಪಕ್ಷ 74 ಸ್ಥಾನಗಳನ್ನು ಹಾಗೂ ಇತರರು 182 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎನ್ನಲಾಗಿದೆ.

ಎನ್‌ಡಿಎ ಮತಗಳಿಕೆ ಕುಸಿತ: ಆದರೆ NDA ಮೈತ್ರಿಕೂಟ ಹಾಗೂ INDIA ಕೂಟದ ನಡುವಿನ ಮತ ಹಂಚಿಕೆಯಲ್ಲಿನ ಅಂತರದಲ್ಲಿ ಕೇವಲ ಶೇ.2ರಷ್ಟು ಮಾತ್ರ ಅಂತರವಿದೆ. ಎನ್‌ಡಿಎ ಮೈತ್ರಿಕೂಟ ಶೇ.43ರಷ್ಟು ಹಾಗೂ ಇಂಡಿಯಾ ಕೂಟ ಶೇ.41ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಹೀಗಾಗಿ ಕಳೆದ ಸಲ ಶೇ.45 ಮತ ಪಡೆದಿದ್ದ ಎನ್‌ಡಿಎಯ ಮತಗಳಿಕೆ ಪ್ರಮಾಣ ಕುಸಿಯಬಹುದು ಎಂದು ಈ ಸಮೀಕ್ಷೆ ಹೇಳಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 353 ಸ್ಥಾನ ಬಂದಿದ್ದವು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ ಸಹ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಖಚಿತವಾಗಿದೆ.


ಕರ್ನಾಟಕದಲ್ಲಿ BJPಗೆ 23, ಕಾಂಗ್ರೆಸ್‌ಗೆ 5

 ಕರ್ನಾಟಕದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೆ BJP 23 ಸ್ಥಾನ, ಕಾಂಗ್ರೆಸ್ 5 ಸ್ಥಾನ ಗೆಲ್ಲಲಿವೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ ಶೇ.44, ಕಾಂಗ್ರೆಸ್ ಶೇ.34, ಇತರೆ ಪಕಗಳು ಶೇ. 22 ಮತ ಪಡೆದುಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿದೆ.