ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದಾತನನ್ನು ಚಾಕುವಿನಿಂದ ಇರಿದು ಕೊಂದ ತಂದೆ
Monday, July 10, 2023
ನವದೆಹಲಿ: ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಒಂದು ವರ್ಷದ ಬಳಿಕ, ರವಿವಾರ ಮುಂಜಾನೆ ಗೊಂಡಲ್ ಪಟ್ಟಣದಲ್ಲಿ ಸಂತ್ರಸ್ತೆಯ ತಂದೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಘಟನೆ ನಡೆದ ಕೆಲವು ಗಂಟೆಗಳ ಬಳಿಕ, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದರು.
ಗೊಂಡಾಲ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ರವಿವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ವಿಜಯ್ ಬಟಾಲಾ ಎಂಬಾತನನ್ನು ಚಾಕುವಿನಿಂದ ಇರಿಯಲಾಗಿತ್ತು. ಬಟಾಲಾ ತನ್ನ ಸ್ನೇಹಿತ ದೀಪ್ ಮಾಳವೀಯ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಸಹಸವಾರನಾಗಿ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಗೊಂಡಾಲ್ ಪಟ್ಟಣದ ಚಾರ್ ದುಕಾನ್ ಬಳಿ ಈ ಘಟನೆ ನಡೆದಿದೆ. ಆಟೋರಿಕ್ಷಾ ಡ್ರೈವರ್ ಆಗಿರುವ ಹುಡುಗಿಯ ತಂದೆ ಬಟಾಲಾ ಹೆಸರನ್ನು ಕರೆದು ನಿಲ್ಲಿಸಿದ್ದಾನೆ. ಬಳಿಕ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಯ ಎದೆಗೆ ಚಾಕುವಿನಿಂದ ಇರಿದಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಗೂಡ್ಸ್ ಗಾಡಿ ಓಡಿಸುತ್ತಿದ್ದಾತ, ಗಾಯಾಳು ಬಟಾಲಾನನ್ನು ತಕ್ಷ ಖಾಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾನೆ. ಆದರೆ ಬಟಾಲಾ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಟಾಲಾನ ತಂದೆ ನೀಡಿದ ದೂರಿನನ್ವಯ ಪೊಲೀಸರು ಆಟೋ ರಿಕ್ಷಾ ಚಾಲಕನ ಮೇಲೆ ಕೊಲೆ ಆರೋಪವನ್ನು ದಾಖಲಿಸಿದ್ದು ಕೆಲ ಗಂಟೆಗಳ ಬಳಿಕ ಆತನನ್ನು ಬಂಧಿಸಿದ್ದಾರೆ.
ಆಟೊರಿಕ್ಷಾ ಚಾಲಕನು ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಂದು ವರ್ಷದ ಹಿಂದೆ ಬಟಾಲ ಮತ್ತು ಬಟಾಲನ ಸ್ನೇಹಿತರಾದ ಆಕಾಶ್, ಗೋವಿಂದ್, ಹಿಟೊ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಭಾನುವಾರ ಸಲ್ಲಿಸಿದ ದೂರಿನಲ್ಲಿ ಬಟಾಲಾ ಅವರ ತಂದೆ ಆಟೋರಿಕ್ಷಾ ಚಾಲಕ ತನ್ನ ಮಗ ಮತ್ತು ಇತರರ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.