ಮಂಗಳೂರು: ಕಾರು ಚಾಲಕ ಅನುಮಾನಾಸ್ಪದ ಸಾವು; ಕೊಲೆ‌‌ ಶಂಕೆ



ಮಂಗಳೂರು: ಕಾರು ಚಾಲಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಗರದ ನೆಹರೂ ಮೈದಾನದ ಬಳಿ ಮಂಗಳವಾರ ಸಂಜೆ ನಡೆದಿದೆ. ಪೊಲೀಸರು ಈ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಅಮ್ಮುಂಜೆ ನಿವಾಸಿ ಕಾರು ಚಾಲಕ ಜನಾರ್ದನ ಬೇರಿಂಜೆ(45) ಮೃತಪಟ್ಟ ವ್ಯಕ್ತಿ.

ಮಂಗಳವಾರ ಸಂಜೆ 5ರ ಸುಮಾರಿಗೆ ಜನಾರ್ದನ ಅವರ ಮೊಬೈಲ್ ಸುಲಿಗೆಗೆ ಕೆಲವರು ಯತ್ನಿಸಿದ್ದರು. ಈ ವೇಳೆ ಹೊಡೆದಾಟ ಸಂಭವಿಸಿದೆ. ಈ ಆಘಾತದಿಂದ ಜನಾರ್ದನ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu