ಆತ್ಮಹತ್ಯೆಗೆ ಶರಣಾದಳು 22ರ ವಿವಾಹಿತೆ: ಪತಿಯ ಮನೆಯವರ ಮೇಲೆ ಕೊಲೆ ಆರೋಪ


ದೇವನಹಳ್ಳಿ: ಪ್ರೀತಿ ವಿವಾಹವಾಗಿದ್ದ ಯುವತಿ ಒಂದೂವರೆ ವರ್ಷದ ಬಳಿಕ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಟ್ಟೆಇಂದೆಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಕಟ್ಟೆಇಂದೆಹಳ್ಳಿ ಗ್ರಾಮದ ಮೇಘನಾ (22) ಮೃತಪಟ್ಟ ದುರ್ದೈವಿ.

ಕಳೆದ ಒಂದೂವರೆ ವರ್ಷದ ಹಿಂದೆ ಮೇಘನಾ ಹಾಗೂ ನಾಗೇಶ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಅದೇನೋ ಗೊತ್ತಿಲ್ಲ ರಾತ್ರಿ ದಂಪತಿ ಮಧ್ಯೆ ಊಟದ ವಿಚಾರಕ್ಕೆ ಜಗಳ ನಡೆದಿದೆ. ಇದೇ ವಿಚಾರಕ್ಕೆ ಮನನೊಂದ ಮೇಘನಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದೆ.

 ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಘನಾ ಪತಿ ನಾಗೇಶ ಹೇಳುತ್ತಿದ್ದಾರೆ. ಆದರೆ ಆಕೆಯ ತವರು ಮನೆಯವರು ಪತಿಯ ಕಡೆಯವರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




 
BREAKING NEWS
Loading latest news...
Join our WhatsApp Channel Powered By : Online Pudu